ನನ್ನ ಅವಧಿಯಲ್ಲಿ ಧರ್ಮಬೇಧ ಬಿಟ್ಟು ಎಲ್ಲರಿಗೂ ಅನುದಾನ ಒದಗಿಸಲಾಗಿದೆ: ರಮಾನಾಥ ರೈ
ವಿಟ್ಲ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನನ್ನ ಅವಧಿಯಲ್ಲಾಗಿದೆ. ಧರ್ಮಬೇಧ ಮಾಡದೇ ಸರ್ವ ಧರ್ಮೀಯರ ಪ್ರಾರ್ಥನಾ ಕೇಂದ್ರಗಳಿಗೆ ಅನುದಾನ ಒದಗಿಸಿದ್ದೇನೆ ಎಂದು ಮಾಜಿ ಸಚಿವ ಬಿ.ರಮಾನಾಥಯವರು ರೈ ಹೇಳಿದರು.
ವಿಧಾನಪರಿಷತ್ ಸದಸ್ಯ ಡಾ.ಕೆ.ಗೋವಿಂದ ರಾಜ್ ಅವರ ೨.೫ ಲಕ್ಷ ರೂ. ಅನುದಾನದಲ್ಲಿ ವೀರಕಂಬ ಗ್ರಾಮದ ಮಂಗಳಪದವಿನಲ್ಲಿ ನಿರ್ಮಿಸಿದ ಆಟೋ ರಿಕ್ಷಾ ನಿಲ್ದಾಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ ನೀರು, ರಸ್ತೆಗೆ ಭಾರೀ ಅನುದಾನ ಒದಗಿಸಲಾಗಿದೆ. ಸಿರಿಚಂದನವನ ವೀರಕಂಬದಲ್ಲಿ ಮಾಡಲಾಗಿದೆ. ಎಂದರು.
ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಪ.ಪಂ.ಸದಸ್ಯ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ವಲಯ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಂಕಪ್ಪ ಗೌಡ, ಎಂ.ಕೆ.ಮೂಸಾ, ಅಬ್ದುಲ್ ಖಾದರ್, ಜಿಲ್ಲಾ ಯುವ ಕಾಂಗ್ರೆಸ್ ನ ಗಿರೀಶ್ ಆಳ್ವ, ವೀರಕಂಬ ಗ್ರಾ.ಪಂ.ಸದಸ್ಯ ರಘು ಪೂಜಾರಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು. ಗುತ್ತಿಗೆದಾರ ನಾಗರಾಜ ಶೆಟ್ಟಿ ಮತ್ತು ಪುರಂದರ ಅಂಚನ್ ಅವರನ್ನು ಗೌರವಿಸಲಾಯಿತು.
ಮಂಗಳಪದವು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೊಬ್ಬೆಕೇರಿ, ಫೆಲಿಕ್ಸ್ ಪಾಯಸ್, ವಸಂತ ಪೂಜಾರಿ, ನೋಣಯ್ಯ ಪೂಜಾರಿ, ಅಶೋಕ್ ಪೂಜಾರಿ ಎನ್.ಎಸ್.ಡಿ., ಇಸ್ಮಾಯಿಲ್ ಮಂಗಳಪದವು, ಅದ್ರಾಮ ಮಂಗಳಪದವು, ಖಾದರ್ ನೆಲ್ಲಿಗುಡ್ಡೆ, ಆನಂದ ಭಂಡಾರಿ ಯವರನ್ನು ಸನ್ಮಾನಿಸಲಾಯಿತು.