ಒಡಿಯೂರು ಸಂಸ್ಥಾನದಲ್ಲಿ ಹರಿಕಥಾ ಸತ್ಸಂಗ ಸಪ್ತಾಹ

0

ಇರವಿನ ಅರಿವು ನಮ್ಮಲ್ಲಾದರೆ ಅದೇ ಆದ್ಯಾತ್ಮ: ಒಡಿಯೂರು‌ ಶ್ರೀ

ವಿಟ್ಲ: ಇದೊಂದು ಪುಣ್ಯ ಸಂಪಾದನೆಗಿರುವ ದಾರಿ. ನಮ್ಮ ಆಸೆಗೆ ಮಿತಿ ಇರಬೇಕು. ಜೀವನದ ಆರಂಭ ಮತ್ತೆ ಅಂತ್ಯದ ಅರಿವಿರಲಿ. ಹುಟ್ಟು ಸಾವಿನ ಮಧ್ಯೆ ಇರುವ ಜೀವನವನ್ನು ಸಾರ್ಥಕ್ಯ ಮಾಡಬೇಕು. ನಮ್ಮಲ್ಲಿ ಅರಿವಿನ ಕೊರತೆ ಇದೆ. ಇರವಿನ ಅರಿವು ನಮ್ಮಲ್ಲಾದರೆ ಅದೇ ಆದ್ಯಾತ್ಮ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಯವರು ಹೇಳಿದರು.

ಅವರು ಡಿ. 1ರಿಂದ ಡಿ. 7ರ ತನಕ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಪ್ರಯುಕ್ತ ನಡೆಯುತ್ತಿರುವ ಹರಿಕಥಾ ಸತ್ಸಂಗ ಸಾಪ್ತಾಹದ ಬಳಿಕ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಾವೆಲ್ಲ ಹೇಗೆ ಬದುಕ್ಕುತ್ತಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಜ್ಞಾನಯುಕ್ತ ವ್ಯಕ್ತಿ ಉತ್ತಮ ಮನುಷ್ಯನಾಗಲು ಸಾಧ್ಯ. ಭಕ್ತಿ, ಜ್ಞಾನ, ವೈರಾಗ್ಯ ಜೀವನದ ಆಭರಣಗಳು. ಜ್ಞಾನ ಗಂಗೆಯಾಗಿ ಹರಿಯುತ್ತದೆ. ಭಾರತದ ಆತ್ಮ ಆದ್ಯಾತ್ಮ. ಅರಿತು ಆಚರಿಸಬೇಕು ಹೊರತಾಗಿ ಅನುಕರಣೆಗಲ್ಲ ಅನುಸರಣೆಗೆ ಉಳ್ಳದ್ದು. ದತ್ತ ಅವತಾರ ಬಹಳ‌ ಶ್ರೇಷ್ಟವಾದುದು. ಭಗವಂತನ ಅವತಾರ ಜ್ಞಾನ ಅವತಾರ. ಮನಸ್ಸು ಶುದ್ದವಿರಬೇಕು. ಪುಣ್ಯ ಸಂಪಾದನೆಗೆ ಇಂತಹ ಕಾರ್ಯಕ್ರಮ ಪೂರಕ ಎಂದರು.

ಈ ಸಂದರ್ಭದಲ್ಲಿ ಈಶ್ವರದಾಸ ಕೊಪ್ಪೇಶ್ವರ ರವರಿಂದಸಂತಜ್ಞಾನೇಶ್ವರ ಹರಿಕಥಾ ಪ್ರಸಂಗ ನಡೆಯಿತು. ವಜ್ರಮಾತ ವಿಕಾಸ ಕೇಂದ್ರದ ಸದಸ್ಯೆಯರು‌ ಸ್ವಾಮೀಜಿಗೆ ಫಲಪುಷ್ಪ ನೀಡಿ‌ ಸ್ವಾಗತಿಸಿದರು. ಸಂತೋಷ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರೇಣುಕಾ ಎಸ್.ರೈ ವಂದಿಸಿದರು.

LEAVE A REPLY

Please enter your comment!
Please enter your name here