ಬಂಟ್ವಾಳ: ದೈವದೇವರ ಮನೆತನದಿಂದ ಬಂದ ಕಾರಣ ನನಗೆ ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಿದ್ದು, ರಾಜಕೀಯ ವನ್ನು ಜೀವನ ಮಾಡದೆ ಶೃದ್ದೆಯಿಂದ ಕೆಲಸ ಮಾಡಿದ ತೃಪ್ತಿ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಶಾಸಕರ ಮುತುವರ್ಜಿಯಿಂದ ಕರಾವಳಿ ಪ್ರಾಧಿಕಾರದ ಅನುದಾನದಲ್ಲಿ ರೂ.15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಬಿಸಿರೋಡಿನ ಮೊಡಂಕಾಪು ಗುತ್ತು ಚಾವಡಿ ಕಾಂಕ್ರೀಟ್ ರಸ್ತೆ ಯನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷಚನಿಲ ತಿಮ್ಮಪ್ಪ ಶೆಟ್ಟಿ, ಅವರು ಮಾತನಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕರ ಮೂಲಕ ಸರಕಾರ ಕ್ಕೆ ಮನವಿ ಮಾಡಲಾಗಿದೆ.
ಅಮೂಲಕ ಜಿಲ್ಲೆಯ ಅಭಿವೃದ್ಧಿ ಗಾಗಿ ಪ್ರಾಧಿಕಾರದ ಮೂಲಕ ಮಾಡಲು ವಿಶೇಷ ಪ್ರಯತ್ನ ಮಾಡುತ್ತೇನೆ ಎಂದರು.
ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೇಡಿಕೆಯನ್ನು ಹಂತಹಂತವಾಗಿ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಡಬ್ಬಲ್ ಇಂಜಿನ್ ಸರಕಾರ ಎಲ್ಲಾ ಸ್ತರದ ಸಮಾಜದ ಅಭಿವೃದ್ಧಿಗೆ ಹೆಚ್ಚಿ ನ ಒತ್ತು ನೀಡಿದೆ ಎಂದು ಅವರು ಹೇಳಿದರು.
ಕರಾವಳಿ ಪ್ರಾಧಿಕಾರದ ಸಿಬ್ಬಂದಿ ಪವನ್ ಶೆಟ್ಟಿ , ವಿಶ್ವನಾಥ ಶೆಟ್ಟಿ ಮೊಡಂಕಾಪು ಗುತ್ತು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ ಅರಳ, ಪ್ರಮುಖರಾದ ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜ, ವಿಶ್ವನಾಥ ಕೊಟ್ಟಾರಿ, ಮಚ್ಚೇಂದ್ರನಾಥ ಸಾಲಿಯಾನ್, ನಾರಾಯಣ ಶೆಟ್ಟಿ, ನಿರಂಜನ ರೈ, ನಾರಾಯಣ ಶೆಟ್ಟಿ, ಸಂಜೀವ ಶೆಟ್ಟಿ, ರಮೇಶ್ ಶೆಟ್ಟಿ, ತಿಮ್ಮಪ್ಪ ಮೆಲಾಂಟ, ದೇವದಾಸ್ ಆಳ್ವ, ವೇಣುಪ್ರಸಾದ್ ಶೆಟ್ಟಿ, ಸತೀಶ್ ಶೆಟ್ಟಿ ಮೊಡಂಕಾಪು , ಸತೀಶ್ ಶೆಟ್ಟಿ ಕೊಳತ್ತಮಜಲು, ಪುರುಷೋತ್ತಮ ಶೆಟ್ಟಿ ವಾಮದಪದವು, ಶರ್ಮಿತ್ ಜೈನ್, ವಿಶ್ವನಾಥ ಚೆಂಡ್ತಿಮಾರ್, ಯಶೋಧರ ಕರ್ಬೆಟ್ಟು, ಗುತ್ತಿಗೆದಾರ ಧೀರಜ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ವಿವೇಕ್ ಶೆಟ್ಟಿ ನಗ್ರಿಗುತ್ತು ಪ್ರಸ್ತಾವಿಕವಾಗಿ ಮಾತನಾಡಿದರು.ಸತೀಶ್ ಶೆಟ್ಟಿ ಧನ್ಯವಾದ ನೀಡಿದರು. ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.