ಬಂಟ್ವಾಳ: ಗೋಳ್ತಮಜಲು ಗ್ರಾಮದ ಶ್ರೀ ಗಣೇಶ್ ಮಂದಿರ , ಗಣೇಶ್ ನಗರದಲ್ಲಿ ಭಜನಾ ಕಮ್ಮಟ ಕಾರ್ಯಕ್ರಮ ನಡೆಯಿತು.
ಮಂದಿರದ ಗೌರವಾಧ್ಯಕ್ಷ ಶ್ಯಾಮ್ ಭಟ್ ತೋಟ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಜಗದೀಶ್ ಹೊಳ್ಳ ಮೊಡಂಕಾಪು, ಸುದರ್ಶನ್ ಜ್ಯೋತಿಗುಡ್ಡೆ, ರಾಜೇಶ್ ಅಮ್ಟೂರ್ ಭಜನಾ ಕಮ್ಮಟವನ್ನು ನಡೆಸಿಕೊಟ್ಟರು.
ಸಂಜೆ ನಡೆದ ಸಮಾರೋಪ ಸಮಾರಂಭ ಮಂದಿರದ ಶ್ರೀ ಗೋಪಾಲಕೃಷ್ಣ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಮಂದಿರ ಕಲ್ಲಡ್ಕದ ಹಿರಿಯ ಭಜನಾ ಸಂಘಟಕ ಡೊಂಬಯ್ಯ ಟೈಲರ್ ಕಲ್ಲಡ್ಕ,ಸೌತಡ್ಕ ಫರ್ನಿಚರ್ ಬಂಟ್ವಾಳ ಇದರ ಮಾಲಕ ನಾಗೇಶ್ ಸಾಲ್ಯಾನ್,ತಾ.ಪಂ ನ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರ್ ಶ್ಯಾಮ್ ಭಟ್ ಭಾಗವಹಿಸಿದ್ದರು.
ಸಮಾರಂಭದಲ್ಲಿ ಶ್ರೀ ರಾಮ ಮಂದಿರ ಕಲ್ಲಡ್ಕದ ಹಿರಿಯ ಭಜನಾ ಸಂಘಟಕ ಡೊಂಬಯ್ಯ ಟೈಲರ್ ಕಲ್ಲಡ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿದ ಶ್ರೀಯುತರು ಭಜನೆ ಇದ್ದಲ್ಲಿ ವಿಭಜನೆ ಇರುವುದಿಲ್ಲ.ಪ್ರತಿ ಮನೆಯಲ್ಲೂ ಸಂಜೆಯ ಸಮಯ ನಿತ್ಯಭಜನೆ ನಡೆಯುವಂತಾಗಲಿ ಎಂದು ನುಡಿದರು.
ಸಮಾರಂಭದಲ್ಲಿ ಗ್ರಾ.ಪಂ ಸದಸ್ಯರಾದ ಪುರುಷೋತ್ತಮ,ಶ್ರೀಮತಿ ಸರೋಜಿನಿ ಶೆಟ್ಟಿ, ನಳಿನಿ,ಮುರಳಿಕೃಷ್ಣ ಭಟ್ ತೋಟ, ಮಂದಿರದ ಉತ್ಸವ ಸಮಿತಿ ಅಧ್ಯಕ್ಷ ಮಿಥುನ್ ಪೂಜಾರಿ ಹೊಸಮನೆ,ತಿಲಕ್ ರಾಜ್ ಹೊಸೈಮಾರು,ಮೋಹನ್ ಎಚ್,ನಾಗೇಶ್ ಆಚಾರ್ಯ,ರಾಮಣ್ಣ ಶೆಟ್ಟಿ ಗೋಳ್ತಮಜಲು, ವಿಘ್ನೇಶ್ ಆಚಾರ್ಯ,ದಿನೇಶ್ ಗೋಳ್ತಮಜಲು ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್ ಟೈಲರ್ ಪ್ರಾಸ್ತಾವಿಕ ಭಾಷಣದ ಮೂಲಕ ಅತಿಥಿಗಳನ್ನು ಸ್ವಾಗತಿಸಿ, ಮೋನಪ್ಪ ದೇವಶ್ಯ ವಂದಿಸಿ , ರವೀಶ್ ಆಚಾರ್ಯ ಗಣೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.