ಬಂಟ್ವಾಳ: ಸರಪಾಡಿ ಸಮಿಪದ ಅಲ್ಲಿಪಾದೆ ಎಂಬಲ್ಲಿ ಸಂತ ಜೋನ್ ಚರ್ಚ್ ಪಕ್ಕದ ಸರಕಾರಿ ಜಾಗದಲ್ಲಿ ರಾತೋರಾತ್ರಿ ಏಸುವಿನ ಪ್ರತಿಮೆ ನಿರ್ಮಿಸಿ ಅದಕ್ಕೆ ಅವರಣ ಗೋಡೆ ನಿರ್ಮಿಸಿ ಸರಕಾರಿ ಜಾಗವನ್ನು ಕಬಳಿಸುವ ಹುನ್ನಾರದಲ್ಲಿದ್ದವರಿಗೆ ಹಿಂದು ಜಾಗರಣ ವೇದಿಕೆ ಸರಪಾಡಿ ವಲಯದಿಂದ ಎಚ್ಚರಿಕೆಯನ್ನು ನೀಡಲಾಗಿತ್ತು.
ನಾವೂರ,ಅಲ್ಲಿಪಾದೆ,ಪಂಚಾಯತ್,ತಾಲೂಕು ದಂಡಾಧಿಕಾರಿಗೆ ತೆರವಿಗೆ ಆಗ್ರಹ ಮಾಡಿತ್ತು. ಶುಕ್ರವಾರ ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿ ಕರೆದು ಒಂದು ವಾರದ ತೆರವಿಗೆ ಹಿಂ.ಜಾ.ವೇ.ಗಡುವು ನೀಡಿತ್ತು.ಇದರ ಬೆನ್ನಲ್ಲೇ ರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿದ್ದು ಬೆಳಿಗ್ಗೆ ತಾಲೂಕು ಆಡಳಿತದ ಯಂತ್ರ ಗರ್ಜನೆ ಮಾಡಿದ್ದು ಅವರಣ ಗೋಡೆ ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.