ಅಲ್ಲಿಪಾದೆಯಲ್ಲಿ ಸರಕಾರಿ ಜಾಗದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಪ್ರಕರಣ

0

ಅನಧಿಕೃತವಾಗಿ ಪ್ರತಿಮೆ ನಿರ್ಮಾಣ ಮಾಡಲಾಗಿದೆಯೆಂದು ಹಿಂ.ಜಾ.ವೇ ಬಂಟ್ವಾಳ ಘಟಕದಿಂದ ತಹಶಿಲ್ದಾರ್‌ ಗೆ ದೂರು.

ಬಂಟ್ವಾಳ : ತಾಲೂಕಿನ ಸರಪಾಡಿ ಹಾಗೂ ನಾವೂರು ಗ್ರಾಮಕ್ಕೆ ಹೊಂದಿಕೊಂಡಿರುವ ಅಲ್ಲಿಪಾದೆಯ ಸಂತ ಜೋನ್ ಚರ್ಚ್‌ನ ಮುಂಭಾಗದ ಸರಕಾರಿ ಜಾಗದಲ್ಲಿ ರಾತ್ರೋರಾತ್ರಿ ಕಾನೂನು ಬಾಹಿರವಾಗಿ ಏಸುವಿನ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಮತ್ತು ಈ ಪ್ರತಿಮೆಯ ಸುತ್ತಲು ಅನಧಿಕೃತ ಆವರಣವನ್ನು ನಿರ್ಮಾಣ ಮಾಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ಕೂಡಲೇ ಏಸುವಿನ ಪ್ರತಿಮೆ ತೆರವುಗೊಳಿಸಬೇಕೆಂದು ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದಿಂದ ನಾವೂರು ಪಂಚಾಯತ್‌ ಮತ್ತು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here