ನೇತ್ರಾವತಿ ನದಿಗೆ ಜಕ್ರಿ ಬೆಟ್ಟಿನಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಶಿಲಾನ್ಯಾಸ

0

ಬಂಟ್ವಾಳ : ನೇತ್ರಾವತಿ ನದಿಗೆ ಜಕ್ರಿಬೆಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಬಂಟ್ವಾಳ-ನರಿಕೊಂಬು ಗ್ರಾಮ ಸಂಪರ್ಕದ 135 ಕೋಟಿ ರೂ.ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ನ. 18 ರಂದು ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ನೀರಾವರಿ ಇಲಾಖೆಯಿಂದ 4ಸಾವಿರ ಕೋಟಿ ಅನುದಾದ ಬಜೆಟ್ ಸಿದ್ದಪಡಿಸಿದ್ದು ಅದರಲ್ಲಿ ಪ್ರತೀ ವರ್ಷ 500 ಕೋಟಿ ರೂ. ದ.ಕ., ಉಡುಪಿ ಜಿಲ್ಲೆಗೆ ವಿನಿಯೋಗ ಮಾಡುತ್ತಿರುವುದಾಗಿ ತಿಳಿಸಿದರು.

2050 ಇಸವಿಯ ಹೊತ್ತಿಗೆ ಜಿಲ್ಲೆಯು ಕುಡಿಯುವ ನೀರಿನ ಉದ್ದೇಶದಲ್ಲಿ ಸ್ವಾವಲಂಬಿ ಆಗುವ ಉದ್ದೇಶದೊಂದಿಗೆ ಯೋಜನೆ ರೂಪಿಸಿದ್ದಾಗಿ ತಿಳಿಸಿದರು. ಸಮುದ್ರದ ಉಪ್ಪುನೀರು ತಡೆದು ಶುದ್ದ ಭೂಮಿ ಬಳಕೆಯ ಗಾರ್‌ಲೇಂಡ್ ಯೋಜನೆಯಂತೆ ಉತ್ತರ ಕನ್ನಡ ಸಹಿತ ಮೂರು ಕಡೆಗಳಲ್ಲಿ ಕಾಮಗಾರಿಯ ಅನುಷ್ಟಾನವಾಗಿದ್ದು ಅದರ ಉದ್ಘಾಟನೆ ಮಾಡಲಾಗಿದೆ.

ಇದರಿಂದ 25 ಸಾವಿರಕ್ಕೂ ಅಧಿಕ ಮಿ ಕೃಷಿ ಉದ್ದೇಶಕ್ಕೆ ದೊರೆತಿದೆ ಎಂದರು. ನೇತ್ರಾವತಿ ನದಿಗೆ ಹರೆಕಳ ಸಹಿತ ಮೂರು ಕಡೆಗಳಲ್ಲಿ ಸಂಚಾರ ಸಹಿತದ ಅಣೆಕಟ್ಟು ನಿರ್ಮಾಣ ಯೋಜನೆ ರೂಪಿಸಿದ್ದಾಗಿ ತಿಳಿಸಿದರು. ಜಕ್ರಿಬೆಟ್ಟು ಯೋಜನೆಯಿಂದ ಬಂಟ್ವಾಳ ಮತ್ತು ಮಂಗಳೂರಿನ ಕುಡಿಯುವ ನೀರು ಸಮಸ್ಯೆ ನಿವಾರಣೆ, ಅಂತರ್ಜಲ ವೃದ್ದಿ, ಸಂಚಾರದ ಅವಕಾಶಗಳನ್ನು ಜನ ಸಾಮಾನ್ಯರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಮಾತನಾಡಿ ಕ್ಷೇತ್ರದ ಹಲವು ನೀರಾವರಿ ಯೋಜನೆಗಳಿಗೆ ಸಚಿವರು ಅನುದಾನ ನೀಡಿದ್ದಾರೆ. ಕ್ಷೇತ್ರವು ಈ ಮೂಲಕ ನದಿ ನೀರನ್ನು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಅತೀ ಹೆಚ್ಚು ಬಳಕೆ ಮಾಡಿಕೊಂಡಂತಾಗುತ್ತದೆ ಎಂದರು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ ತಾನು ಶಾಸಕನಾಗಿ ಇದ್ದ 40 ತಿಂಗಳ ಅವಧಿಯಲ್ಲಿ ಮಾಧುಸ್ವಾಮಿಅವರು ಪ್ರತಿಪಕ್ಷದ ಸಚಿವರಾಗಿದ್ದರು ಉತ್ತಮ ಸಹಾಯ ಸಹಕಾರ ನೀಡಿದ್ದಾಗಿ ಸ್ಮರಿಸಿದರು.

ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ ಯೋಜನೆಯ ಮೂಲಕ ಜನ ಸಾಮಾನ್ಯರಿಗೆ ಪ್ರಯೋಜನ ಆಗುವುದು. ಸಂಚಾರದ ಅನೇಕ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ ಎಂದರು.


ವೇದಿಕೆಯಲ್ಲಿ ಸುಲೋಚನಾ ಭಟ್, ನರಿಕೊಂಬು ಗ್ರಾ.ಪಂ. ಅಧ್ಯಕ್ಷೆ ವಿನುತಾ ಪುರುಷೋತ್ತಮ, ಬಂಟ್ವಾಳ ತಹಶೀಲ್ದಾರ್ ಡಾ| ಸ್ಮಿತಾ ರಾಮು, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಮುಖ್ಯ ಇಂಜಿನಿಯರ್ ರಾಘವನ್, ಕಾರ್ಯಪಾಲಕ ಇಂಜಿನಿಯರ್ ಗೋಕುಲ್‌ದಾಸ್, ವಿಷ್ಣು ಕಾಮತ್, ಸಹಾಯಕ ಇಂಜಿನಿಯರ್ ಶಿವಪ್ರಸನ್ನ, ಗುತ್ತಿದಾರ ಯು. ರಾಜೇಶ್ ಕಾರಂತ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮತ್ತು ಇತರರು ಉಪಸ್ಥಿತರಿದ್ದರು. ಬುಡಾಅಧ್ಯಕ್ಷಬಿ. ದೇವದಾಸ ಶೆಟ್ಟಿ ಸ್ವಾಗತಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.


ಯೋಜನೆ: ನೇತ್ರಾವತಿ ನದಿ ಬಿ. ಮೂಡ- ನರಿಕೊಂಬು ಗ್ರಾಮ ಸಂಪರ್ಕ
ಯೋಜನೆಯ ಅಂದಾಜು ಮೊತ್ತ135 ಕೋಟಿ
ಕಾಮಗಾರಿ ಚಾಲನೆ: 17-9-2022 ಮುಕ್ತಾಯ 16-09-2024
ಸೇತುವೆಯ ಉದ್ದ: 351. 25 ಮೀ.
ಸೇತುವೆ ಅಗಲ: 7.50 ಮೀ.
ಪಿಲ್ಲರ್‌ಗಳು: 21
ಗೇಟ್‌ಗಳ ಮಾದರಿ: ವರ್ಟಿಕಲ್ ಲಿಪ್ಟ್ ಮಾದರಿ
ನೀರು ಶೇಖರಣಾ ಸಾಮರ್ಥ್ಯ: 166.30 ಎಂ.ಸಿ.ಎಫ್.ಟಿ
ನೀರು ಸಂಗ್ರಹ ಅಣೆಕಟ್ಟು ಮೇಲಕ್ಕೆಉದ್ದ: 4.5 ಕಿ.ಮೀ

LEAVE A REPLY

Please enter your comment!
Please enter your name here