ಲಂಚ,ಭ್ರಷ್ಟಾಚಾರದಂತಹ ಅನಾಚಾರಗಳಿಗೆ ಅವಕಾಶ ನೀಡುವುದಿಲ್ಲ-ರವಿಕುಮಾರ್
ಪುತ್ತೂರು:ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಹಮ್ಮಿಕೊಂಡಿರುವ ಜನಾಂದೋಲನಕ್ಕೆ ನೂತನ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ರವಿಕುಮಾರ್‌ರವರು ಸುಳ್ಯದಲ್ಲಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ `ಸುದ್ದಿ’ಯೊಂದಿಗೆ ಮಾತನಾಡಿದರು.ಈ ವೇಳೆ ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಹಮ್ಮಿಕೊಂಡಿರುವ ಆಂದೋಲನದ ವಿಚಾರ ತಿಳಿದ ಅವರು ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶಸೇವೆ ಫಲಕ ಸ್ವೀಕರಿಸಿ ಸುದ್ದಿಯ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು.ಸುದ್ದಿ ಹಮ್ಮಿಕೊಂಡ ಈ ಜನಜಾಗೃತಿ ಅಭಿಯಾನ ಅತ್ಯಂತ ಅವಶ್ಯಕವಾಗಿ ಬೇಕಾಗಿರುವಂತದ್ದು.ಸಾರ್ವಜನಿಕರಿಗೆ ಮನದಟ್ಟಾಗುವಂತದ್ದಾಗಿದ್ದು ನಿಮ್ಮ ಈ ಕಾರ್ಯಕ್ಕೆ ಖಂಡಿತಾ ಯಶಸ್ಸು ಸಿಗುತ್ತದೆ ಎಂದು ಅವರು ಹೇಳಿದರು.
ಈ ಜಿಲ್ಲೆಯ ಜನರು ಸುಶಿಕ್ಷಿತರು, ಪ್ರಜ್ಞಾವಂತರು.ಹಾಗಾಗಿ ಖಂಡಿತಾ ಈ ಅಭಿಯಾನಕ್ಕೆ ಬೆಂಬಲ ನೀಡುತ್ತಾರೆ.ಯಾವುದೇ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡುವುದು ಅಧಿಕಾರಿಗಳ, ಸಿಬ್ಬಂದಿಗಳ ಜವಾಬ್ದಾರಿ, ಆ ಕಾರ್ಯ ನಡೆಸಲು ಲಂಚ, ಭ್ರಷ್ಟಾಚಾರದಂತಹ ಅನಾಚಾರಗಳನ್ನು ಮಾಡುವುದು ಸರಿಯಲ್ಲ.ಈ ರೀತಿಯ ಅನಾಚಾರಗಳಿಗೆ ನಾನು ಅವಕಾಶ ನೀಡುವುದೂ ಇಲ್ಲ ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಹೇಳಿದರು.ಅಧಿಕಾರಿಗಳ ಪರಿಚಯ ಮಾಡಿಕೊಳ್ಳುವ ಮತ್ತು ಸಮಸ್ಯೆ ತಿಳಿಯುವ ದೃಷ್ಟಿಯಿಂದ ಸಮಾಲೋಚನೆ ನಡೆಸಿ ಮಾಹಿತಿ ಪಡೆದಿzವೆ. ಅನೇಕ ವಿಚಾರಗಳು ಗಮನಕ್ಕೆ ಬಂದಿದೆ.೨ ವಾರಗಳಲ್ಲಿ ಮತ್ತೆ ಬಂದು ಈ ಕುರಿತು ಮಾಹಿತಿ ಪಡೆಯಲಿzನೆ.ಜನರ ನಾಡಿಮಿಡಿತ ಅರಿತು ಅವರಿಗೆ ಸವಲತ್ತು ನೀಡಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಜನರೊಂದಿಗೆ ಇದ್ದು, ಜನರ ಕಷ್ಟ ಪರಿಹರಿಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.