ನಾವೂರು ಉಪಚುನಾವಣೆ ಜಿದ್ದಾಜಿದ್ದಿಯಲ್ಲಿ ಎರಡು ಬಣಗಳು

0

ಬಂಟ್ವಾಳ : ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಶ್ಯಪಡೂರು ವಾರ್ಡಿನ ಜ್ಯೋತಿ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಅ. 28ರಂದು ಚುನಾವಣೆಯು ನಡೆಯುತ್ತಿದ್ದು ಕಾಂಗ್ರೆಸ್ ಪರವಾಗಿ ಸುಮಿತ್ರ ಮೋಹನ್, ಬಿಜೆಪಿ ಪರವಾಗಿ ಅಪ್ಪಿ ಪೆರಿಯಾರ್ ಕಣಕ್ಕೆ ನಿಂತಿದ್ದಾರೆ.

ಕಳೆದ ನಾಲ್ಕು ದಿನದಿಂದ ಎರಡು ಪಕ್ಷದ ಘಟಾನುಘಟಿಗಳು ದೇವಶ್ಯ ಪಡೂರಿನಲ್ಲಿ ಮೊಕ್ಕಾಂ ಹೂಡಿದ್ದು ರಾತ್ರಿ ಹಗಲು ಎನ್ನದೇ ಚುನಾವಣೆ ಪ್ರಚಾರವನ್ನು ಮಾಡುತ್ತಿದ್ದು ಜನರಿಗೆ ಹೊಸ ಹೊಸ ಭರವಸೆಯನ್ನು ನೀಡುತ್ತಿದ್ದು ಮುಂದೆ ಕಾಂಗ್ರೆಸ್ ಗೆದ್ದರೆ ಅಧ್ಯಕ್ಷ ಸ್ಥಾನವು ಈಗೀನ ಅಧ್ಯಕ್ಷರಿಗೆ ಸಿಗುವ ಲೆಕ್ಕಾಚಾರದಲ್ಲಿ ಅದರಂತೆ ಬಿಜೆಪಿ ಗೆದ್ದರೆ ನೂತನ ಅಧ್ಯಕ್ಷರು ಬಿಜೆಪಿ ಪರವಾಗಿ ಹಾಗೂ ಶಾಸಕರ ಪರವಾಗಿಯು ಮತದಾನವನ್ನು ಕೇಳುತ್ತಿದ್ದು ಸಾರ್ವಜನಿಕರ ಮಾಹಿತಿ ಪ್ರಕಾರ ಯಾವ ಚುನಾವಣೆಗೂ ದೇವಶ್ಯಪಡೂರು ಗ್ರಾಮದಲ್ಲಿ ಇಷ್ಟೊಂದು ಜನರು ಮತವನ್ನು ಎಂದು ಕೇಳಲು ಬರುತ್ತಿರಲಿಲ್ಲ . ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ತಾಲೂಕು ಪಂಚಾಯತ್ ಸದಸ್ಯರು ಮತ ಕೇಳಲು ಬರುತ್ತಿದ್ದರು. ಆದರೆ ಇಂದಿನ ಚುನಾವಣೆ ಮುಂದೆ ಬರುವ ಎಲ್ಲಾ ಚುನಾವಣೆಗಳಿಗೂ ಪ್ರತಿಷ್ಠೆಯ ಕಣವಾಗಿದೆ.

ದೇವಶ್ಯಪಡೂರು ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳು ಆಗುತ್ತಿದ್ದರು ಕೂಡ ಆರೋಗ್ಯ ಉಪಕೇಂದ್ರದ ಕಟ್ಟಡ ಕಾಮಗಾರಿಯು ಹಾಗೂ ಉಳಿಕೆ ಕಾಮಗಾರಿಯಾದ ಪಟ್ಟೆಜಾಲು ನೂಜೆ ರಸ್ತೆಯು ಅಭಿವೃದ್ದಿ ಆಗ ಬೇಕಾಗಿದೆ. ಈಗಾಗಲೇ ಅಲ್ಲಿಪಾದೆ ಕುಂಟಾಲಪಲ್ಕೆ ರಸ್ತೆಯ ಇಕ್ಕೆಲೆಗಳಲ್ಲಿ ಪೊದೆ ಹಾಗೂ ಹುಲ್ಲಿನ ರಾಶಿ ತುಂಬಿದ್ದು. ಅಲ್ಲಿಪಾದೆ ವಗ್ಗ ರಸ್ತೆಯು ಪೊದೆ ಹಾಗೂ ಹುಲ್ಲಿನಿಂದ ತುಂಬಿದ್ದು ಕೂಡಲೇ ಪಂಚಾಯತ್‌ಯು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ ಎಂಬುದು ಜನರ ಅಭಿಪ್ರಾಯ.

LEAVE A REPLY

Please enter your comment!
Please enter your name here