ಬಂಟ್ವಾಳ-ನರಿಕೊಂಬು ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿ ಆರಂಭ

0

ಬಂಟ್ವಾಳ: ಜಿಲ್ಲೆಯ ಜೀವನದಿಯಾಗಿ ಗುರುತಿಸಿಕೊಂಡ ನೇತ್ರಾವತಿ ನದಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ಮೂರು ಕಡೆ ಪ್ರತ್ಯೇಕ ಸೇತುವೆ ನಿರ್ಮಿಸಿ ನೀರು ಸಂಗ್ರಹಣೆ ಜೊತೆಗೆ ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಜಕ್ರಿಬೆಟ್ಟು ಎಂಬಲ್ಲಿ ಚಾಲನೆ ದೊರೆತಿದೆ. ಒಟ್ಟು ಮೂರು ಸೇತುವೆಗಳ ಪೈಕಿ ಈಗಾಗಲೇ ಬಿಳಿಯೂರು-ತೆಕ್ಕಾರು, ಅಡ್ಯಾರು-ಹರೇಕಳ ಪ್ರದೇಶ ಸಂಪರ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಇದೀಗ ಅಂತಿಮವಾಗಿ ಜಕ್ರಿಬೆಟ್ಟು-ನರಿಕೊಂಬು ಸಂಪರ್ಕಿಸಲು ನೇತ್ರಾವತಿ ನದಿಯಲ್ಲಿ ರೂ. 135 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, ಜಕ್ರಿಬೆಟ್ಟು ಜಾಕ್ವೆಲ್ ಬಳಿ ನೇತ್ರಾವತಿ ನದಿಗೆ ಮಣ್ಣು ರಾಶಿ ಹಾಕಿ ತಾತ್ಕಾಲಿಕ ಸೇತುವೆ ನಿರ್ಮಿಸುತ್ತಿರುವುದು ಕಂಡು ಬಂದಿದೆ.

ನಾಗರಿಕರಲ್ಲಿ ಸಂತಸ:

ಈ ಹಿಂದೆ ದೋಣಿ ಮೂಲಕ ಬಂಟ್ವಾಳ ಪೇಟೆ ಸಂಪಕರ್ಿಸುತ್ತಿದ್ದ ನರಿಕೊಂಬು ಮತ್ತು ಶಂಭೂರು ಗ್ರಾಮಸ್ಥರು ಹೊಸ ಸೇತುವೆ ಮೇಲೆ ವಾಹನ ಸಂಚಾರಕ್ಕೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲಿನ ಅಪಾರ ಮಂದಿ ಕೃಷಿಕರು ಬಂಟ್ವಾಳ-ಪಾಣೆಮಂಗಳೂರು ಮೂಲಕ ನರಿಕೊಂಬು ಗ್ರಾಮ ಸಂಪರ್ಕಿಸುವ ಬದಲಾಗಿ ಸೇತುವೆಯಲ್ಲಿ ನೇರ ಸಂಪರ್ಕ ಸಿಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಲ್ಲಿಸಿದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅನುದಾನ ಮಂಜೂರುಗೊಂಡಿದೆ. ಈ ಹಿಂದೆ  ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೇತುವೆ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿ ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ನಡುವಿನ ಜಕ್ರಿಬೆಟ್ಟು ಮತ್ತು ನರಿಕೊಂಬು ಗ್ರಾಮದ ಪುಳಿಕುಕ್ಕು ಎಂಬಲ್ಲಿ ಈ ಸೇತುವೆ ಸಂಪರ್ಕ ಕಲ್ಪಿಸಲಿದೆ. ಇಲ್ಲಿ ನದಿಯ ಅಗಲ ಒಟ್ಟು 341 ಮೀ. ಇದ್ದು, ಸೇತುವೆಯು ಒಟ್ಟು 7.50 ಮೀ. ಅಗಲ ನಿಮರ್ಾಣಗೊಳ್ಳಲಿದೆ. ಆ ಮೂಲಕ ಸೇತುವೆ ಮೇಲೆ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ. – ಶಿವಪ್ರಸನ್ನ ಆಚಾರ್ಯ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ.

-ಮೋಹನ್ ಕೆ.ಶ್ರೀಯಾನ್ ರಾಯಿ

LEAVE A REPLY

Please enter your comment!
Please enter your name here