ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಮತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕುರು ಗ್ರಾಮ ಪಂಚಾಯತ್ ನಲ್ಲಿ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಬಗ್ಗೆ ತರಭೇತಿ ಕಾರ್ಯಗಾರವು ಅ.14ರಂದು ನಡೆಯಿತು.
ಈ ತರಭೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗವೇಣಿ ಉಪಾಧ್ಯಕ್ಷೆ ಗೀತಾ, ಪಂಚಾಯತ್ ಕಾರ್ಯದರ್ಶಿ ಅಪ್ಪು ನಡ ಪಂಚಾಯತ್ ಸದಸ್ಯರುˌ ಸ್ವ ಸಹಾಯ ಸಂಘದ ಸದಸ್ಯರು ˌಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು. ಜಲ ಜೀವನ್ ಮಿಷನ್ ನ ಸಮುದಾಯ ಸಂಘಟಕಿಯಾದ ಗುಣವತಿ ಮಳೆ ನೀರು ಕೊಯ್ಲು ಮತ್ತು ವಿಲ್ಮಾ ಅವರು ಬೂದು ನೀರು ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿ ವಿಲ್ಮಾ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿದರು.