ಬಂಟ್ವಾಳ :ಜೈವಿಕ ಗೊಬ್ಬರ ಡಾಕ್ಟರ್ ಸಾಯಿಲ್ ಸಾವಯವ ಗೊಬ್ಬರ ಬಳಕೆ ಮತ್ತು ಅದರ ಪ್ರಯೋಜನ ಕುರಿತ ಕೃಷಿ ಕೌಶಲ್ಯ ಅಭಿವೃದ್ದಿ ತರಬೇತಿ ನರಿಕೊಂಬು ಗ್ರಾಮದ ಪೊಯಿತ್ತಾಜೆ ಮನೆಯಲ್ಲಿ ಅ.9ರಂದು ನಡೆಯಿತು.
ಮೈಕ್ರಾಬಿ ಕಂಪೆನಿ ವಿಭಾಗಿಯ ಮೆನೆಜರ್ ಶ್ರೀಕಾಂತ್ ಮಾತನಾಡಿ ಡಾಕ್ಟರ್ ಗೊಬ್ಬರ ಬಳಕೆ ವಿಧಾನ, ಎಷ್ಟು ಪ್ರಮಾಣ, ಯಾವ ಸಮಯದಲ್ಲಿ ನೀಡಬೇಕು ಎಂದು ವಿವರಿಸಿದರು.
ಒಡಿಯೂರ್ ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ.ಸುರೇಶ್ ರೈ ಸ್ವಾಗತಿಸಿ ಮಾತನಾಡಿ, ಅವಿಭಜಿತ ದ. ಕ. ಜಿಲ್ಲೆ ಸಂಪೂರ್ಣ ರಾಸಾಯನಿಕ ಮುಕ್ತ ಸಮಾಜ ಆಗಬೇಕಾಗಿದೆ. ಡಾಕ್ಟರ್ ಸಾಯಿಲ್ ನೀಡಿದಾಗ ಕೃಷಿಯಲ್ಲಿ ತಕ್ಷಣ ಆದಾಯ ಸಿಗುವುದು. ಮಣ್ಣು ರಾಸಾಯನಿಕ ಮುಕ್ತವು ಆಗುತ್ತದೆ ಎಂದರು.
ಸಭೆಯಲ್ಲಿ ಕೃಷಿಕರಾದ ರಾಜಾ ಬಂಟ್ವಾಳ್, ತೋಮಸ್ ವಾಸ್, ಗಿಲ್ಬರ್ಟ್ ವಾಸ್, ಚಂದ್ರಶೇಖರ ಕಲ್ಯಾಣಾಗ್ರಹಾರ, ನವೀನ್ ಮೆನೇಜಸ್, ಚೆನ್ನಪ್ಪ ಪೂಜಾರಿ ಸಾಲುತೋಟ, ಜೋಕಿಮ್ ವಾಸ್ ಪೊಯಿತಾಜೆ, ಜೋಕಿಮ್ ಮೆನೇಜಸ್, ಲೋರನ್ಸ್ ವಾಸ್, ತೋಮಸ್ ಮೆನೇಜಸ್ ಬೊಳಂತೂರ್ ಕಾಮದೇನು ಅಗ್ರೋ ಸಂಸ್ಥೆಯ ಮಾಲಕ ರಂಜನ್ ಮತ್ತು ಇತರರು ಉಪಸ್ಥಿತರಿದ್ದರು.