ಮಾನಸಿಕ ಸಶಕ್ಷತೆ ಬಹಳ ಮುಖ್ಯ: ಎ. ವಿ. ನಾರಾಯಣ
ಬಂಟ್ವಾಳ: ಮಾನಸಿಕವಾಗಿ ಸಶಕ್ತರಾಗುವ ಮೂಲಕ ಹಿರಿಯರು ತಮ್ಮ ಜ್ಞಾನವನ್ನು ಸ್ವಯಂ ವೃದ್ದಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ.ವಿ ನಾರಾಯಣ ತಿಳಿಸಿದರು. ಬಿ.ಸಿ.ರೋಡ್ ಕೈ ಕಂಬದ ಶ್ರಮ್ಯಾ ಪ್ರಾಸ ಇಲ್ಲಿ ಜರಗಿದ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜಮಣಿ ರಾಮಕುಂಜ ಐವತ್ತು ವಯೋಮಾನದ ಬಳಿಕ ವ್ಯಕ್ತಿಯೋರ್ವನು ಪಕ್ವತೆಯ ಮಟ್ಟ ತಲುಪಿರುತ್ತಾನೆ. ಜೀವನದ ಅನುಭವಗಳು ಪರಸ್ಪರ ಭಿನ್ನವಾಗಿದ್ದರೂ ಅವುಗಳ ಹಂಚಿಕೆಗೆ ವೇದಿಕೆ ಕಲ್ಪಿಸಿದ ಹಿರಿಯರ ಸೇವಾ ಪ್ರತಿಷ್ಠಾನವು ಸೂತ್ರ ರೂಪದಲ್ಲಿ ಕೆಲವು ಚಟುವಟಿಕೆಗಳನ್ನು ಈಗಾಗಲೇ ನಡೆಸಿದ್ದು ಮಾದರಿಯಾಗಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಕೈಯಾರು ನಾರಾಯಣ ಭಟ್ ಎಲ್ಲಾ ತಾಲೂಕು ಘಟಕಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿ ಮುಂದಿನ ಯೋಜನೆಗಳ ಮಾಹಿತಿ ನೀಡಿದರು.
ಮಂಗಳೂರು ದಕ್ಷಿಣ ಘಟಕದ ಪದಗ್ರಹಣ,ಹಿರಿಯ ಸಮಾವೇಶ ಸಮಾರಂಭದ ಆಮಂತ್ರಣವ ಪತ್ರಿಕೆಯನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.ಮಂಗಳೂರು ಘಟಕದ ಪದಾಧಿಕಾರಿಗಳಾದ ಭರತ್. ಕೆ, ಬಾಲಕೃಷ್ಣ ಶೆಟ್ಟಿ, ಗಣೇಶ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ, ಭಾಸ್ಕರ ಬಾರ್ಯ, ಬಾಲಕೃಷ್ಣ .ಜಿ, ರಮಾಶಂಕರ .ಸಿ, ಸೋಮಪ್ಪ ಬಂಗೇರ, ಸುಬ್ರಾಯ ಮಡಿವಾಳ, ಸೀತಾರಾಮ ಭಟ್, ಸಿ.ವಿ ಶಂಕರ್ ,ಅನಂತರಾಮ್ ಹೇರ್ಳೆ , ಚಂದ್ರಶೇಖರ ಆಳ್ವ ಪಡುಮಲೆ ಮೊದಲಾದವರು ಪ್ರತಿಷ್ಠಾನದ ಬಲವರ್ಧನೆಗೆ ಸೂಚನೆಗಳನ್ನು ನೀಡಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು.
ಪ್ರತಿಷ್ಠಾನದ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿ ದುಗ್ಗಪ್ಪ. ಎನ್ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಶ್ರಮ್ಯಾ ಪ್ರಾಸದ ಭಾರತಿ ರಾಮಕುಂಜ, ಮೇಧಾ ಮತ್ತು ಧಾತ್ರಿ ಕಾರ್ಯಕ್ರಮದ ಸಂಯೋಜನೆಗೆ ಸಹಕಾರ ನೀಡಿದರು.