ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಎ1 ಹೆಲ್ಪಿಂಗ್ ಮತ್ತು ಇಂಡಿಯನ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫಾಮ್ರ್ ಇದರ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ಏರ್ಪಡಿಸಲಾಗಿದ್ದ ಸೌಹಾರ್ದ ಕೂಟ ಕಾರ್ಯಕ್ರಮವು ಅ.9ರಂದು ನಡೆಯಿತು. ಕಣ್ಣೂರು ಜುಮ್ಮಾ ಮಸೀದಿ ಖತೀಬ ಅನ್ಸಾರ್ ಫೈಝಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖಂಡ ಪ್ರವೀಣ್ ಕೊಂಚಾಡಿ ‘ಎಲ್ಲಾ ಜಾತಿ-ಧರ್ಮಗಳಿಗಿಂತಲೂ ನಮಗೆ ದೇಶ ಮುಖ್ಯ’ ಆಗಬೇಕು ಎಂದರು. ಪ್ರಮುಖರಾದ ಸುನಿಲ್ ಕೊಡಕ್ಕಲ್, ದಿನೇಶ್ ಕಣ್ಣೂರು, ದಯಾನಂದ್, ಪ್ರವೀಣ್, ರವಿರಾಜ್, ನಾಸೀರ್ ಸಾಮಣಿಗ, ಮುಹಮ್ಮದ್ ಮೋನು, ಷರೀಫ್ ವಲಾಲ್, ನವೀನ್, ಎಸ್.ಡಿ.ಶಾಕೀರ್ ಕಣ್ಣೂರು, ನಿಜಾರ್ ಕಣ್ಣೂರು, ರಿಯಾಝ್, ಇಕ್ಬಾಲ್ , ವಸಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.