ಆಶಾಕಿರಣ ಇಸ್ರೇಲ್ ಪ್ರೆಂಡ್ಸ್ ಗ್ರೂಪ್ ವತಿಯಿಂದ ಕರ್ಪೆ ಗ್ರಾಮದ ಅನಾರೋಗ್ಯ ಕುಟುಂಬಕ್ಕೆ ಆರ್ಥಿಕ ನೆರವು

0

ಬಂಟ್ವಾಳ: “ಆಶಾಕಿರಣ ಇಸ್ರೇಲ್” ಫ್ರೆಂಡ್ಸ್ ಗ್ರೂಪ್ ನ ವತಿಯಿಂದಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಹರ್ಷಲತಾ ಕುಟುಂಬಕ್ಕೆ ನೀಡಿದ ಆರ್ಥಿಕ ನೆರವು ರೂ 25,000 ನ್ನೂ ಕರ್ಪೆ ಗ್ರಾಮದ ಫೇರಳ ಬೆಟ್ಟು ಪ್ರೆಂಡ್ಸ್ ಬಳಗದ ಮುಖೇನ ನಗದು ಹಸ್ತಾಂತರ ಮಾಡಲಾಯಿತು.ಕರುಳು ನೋವಿನಿಂದ ಬಳುತ್ತಿರುವ ಕರ್ಪೆ ಗ್ರಾಮದ ಗುತ್ತಿಗೆ ನಿವಾಸಿ ದೇವಾನಂದ ಪೂಜಾರಿ ಪತ್ನಿ ಹರ್ಷಲತಾ ಎಂಬವರಿಗೆ ನೆರವು ಹಸ್ತ ನೀಡಿ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ವಿಷಯ ಕ್ಕೆ ಅನುಗುಣವಾಗಿ ಈ ತಂಡ ತಕ್ಷಣವೇ ಶೀಘ್ರದಲ್ಲಿ ಸ್ಪಂದಿಸಿ ನೆರವು ನೀಡಲು ಮುಂದಾಗಿತ್ತು. ಇದರಂತೆ ಈ ತಂಡದ ಸದಸ್ಯರೊಬ್ಬರು ಸಿದ್ದಕಟ್ಟೆ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ರವರನ್ನು ಸಂಪರ್ಕ ಮಾಡಿ ವಿಚಾರ ತಿಳಿದು ನೆರವು ನೀಡಲು ಮುಂದಾದರು. ಈ ನೆರವು ಕರ್ಪೆ ಗ್ರಾಮದ ಶ್ರೀ ದೈವ ಕೊಡಮಣ್ಣಿತ್ತಾಯ ದೈವಸ್ಥಾನ ಪೇರಳ ಬೆಟ್ಟು ಪ್ರೆಂಡ್ಸ್ ಬಳಗದ ಮುಲಕ ನೀಡಲಾಯಿತು. ಸ್ಥಳೀಯ ಸಿ. ಎ. ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ನೆರವು ನಗದು ಹಸ್ತಂತರಿಸಿದರು.
ಈ ಸಂದರ್ಭದಲ್ಲಿ ಪೇರಳ ಪ್ರೆಂಡ್ಸ್ ಬಳದ ಪ್ರಮುಖರಾದ ಗಂಗಾಧರ ಪುಜಾರಿ, ತೇಜಸ್ ಪೂಜಾರಿ, ನವೀನ್ ಪೂಜಾರಿ ಪೊಸವಕ್ಕೆಲ್, ಹರೀಶ್ ಪೂಜಾರಿ ಶೆಟ್ಟಿಬೆಟ್ಟು ಉಪಸ್ಥಿತರಿದ್ದರು.

ಇಸ್ರೇಲ್ ದೇಶದಲ್ಲಿ ದುಡಿಯುವ ಕರಾವಳಿಯ ಕನ್ನಡಿಗರ “ಆಶಾಕಿರಣ ಇಸ್ರೇಲ್ ” ಗ್ರೂಪ್ ನ ಮೂಲಕ ತವರೂರ ಬಡಕುಟುಂಬಗಳಿಗೆ ಆರ್ಥಿಕ ನೆರವು.

“ಆಶಾಕಿರಣ ಇಸ್ರೇಲ್” ಇಸ್ರೇಲ್ ಫ್ರೆಂಡ್ಸ್ ಹೆಲ್ಪಿಂಗ್ ಗ್ರೂಪ್ ಎಂಬ ಸಂಸ್ಥೆಯ ಮೂಲಕ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಆಯ್ದ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ರೂ.50 ಸಾವಿರ ರೂ ಗಳನ್ನು ಹಂಚಿಕೆ ಮಾಡಲಾಗುತ್ತಿದೆ.
ದಿನಕರ್ ಪುತ್ರನ್ ಎಂಬ ಕನ್ನಡಿಗ ಇಸ್ರೇಲ್ ದೇಶದಲ್ಲಿ ದುಡಿಯುವ ಒಂದಷ್ಟು ಯುವಕರನ್ನು ‌ಒಂದುಗೂಡಿಸಿ ಅಮೂಲಕ ಆಶಾಕಿರಣ ಗ್ರೂಪ್ ರಚನೆ ಮಾಡಿದ್ದಾರೆ.
ಈ ಗ್ರೂಪ್ ಮೂಲಕ ತವರೂರಿನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಬಡಕುಟುಂಬಗಳಿಗೆ ವಿವಿಧ ರೀತಿಯ ಸಮಸ್ಯೆಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಗ್ರೂಪ್ ಹುಟ್ಟು ಹಾಕಿದ್ದಾರೆ.
ಅರೋಗ್ಯ, ಶಿಕ್ಷಣ, ಮನೆ, ಮದುವೆ ಹೀಗೆ ನಾನಾ ಸಮಸ್ಯೆ ಗಳಿಂದ ಬಳಲುತ್ತಿರುವ ಕನ್ನಡಿಗರ ಪಾಲಿಗೆ ನಾವು ಹೊರದೇಶದಲ್ಲಿ ದುಡಿದು ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಅರಂಭ ಮಾಡಿದ ಗ್ರೂಪ್ ನೂರಾರು ಜನರ ಬಾಳಿಗೆ ಬೆಳಕಾಗಿದೆ. ಹೊರ ದೇಶದಲ್ಲಿ ದುಡಿದು ಹಣ ಮಾಡುವುದು ಮಾತ್ರ ಉದ್ದೇಶವಾಗದೆ ಸಾಮಾಜಿಕವಾಗಿ ಹಿಂದುಳಿದ ಜನರ ಕಣ್ಣೀರೊರಸುವ ಕೆಲಸ ಮಾಡಬೇಕು ಅ ಮೂಲಕ ಜನಸೇವೆ ಮಾಡಬೇಕು ಎಂಬ ಮಹದಾಸೆಯಿಂದ 8 ಜನರಿಂದ ಆರಂಭವಾದ ಗ್ರೂಪ್ ನಲ್ಲಿ ಪ್ರಸ್ತುತ 33 ಸದಸ್ಯರಿದ್ದರೆ.

ಯೋಜನೆಗೆ ತುಂಬಿತು ಐದು ವರ್ಷ…

ದಿನಕರ್ ಪುತ್ರನ್ ಎಂಬವರ ಕನಸಿನ ಕೂಸು ಆಶಾಕಿರಣ ಗ್ರೂಪ್ ಇದು ಕೇವಲ 8 ಜನರ ಮೂಲಕ 5. ವರ್ಷಗಳ ಹಿಂದೆ ಇಸ್ರೇಲ್ ನಲ್ಲಿ ಆರಂಭವಾಯಿತು. ಆಬಳಿಕ ಸದಸ್ಯರ ಸಂಖ್ಯೆ 33 ಕ್ಕೆ ಏರಿತು ಹಾಗಾಗಿ ಪ್ರತಿ ತಿಂಗಳು 50 ಸಾವಿರ ರೂ ಹಣವನ್ನು ಬಡವರಿಗೆ ಹಂಚಿಕೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಹೊಂದಿರುವ ಈ ಗ್ರೂಪ್ ಈವರಗೆ ಒಟ್ಟು 105 ಜನರಿಗೆ ಆರ್ಥಿಕ ನೆರವು ನೀಡಿದೆ.

LEAVE A REPLY

Please enter your comment!
Please enter your name here