ಬಿಸಿ ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ನಿಧಿ ಕುಂಭಕ್ಕೆ ಚಾಲನೆ, ಕಾರ್ಯಾಲಯ ಉದ್ಘಾಟನೆ

0

ಪುತ್ತೂರು: ಬಿಸಿ ರೋಡಿನ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ನಿಧಿ ಕುಂಭಕ್ಕೆ ಚಾಲನೆ, ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶ ಮಹೋತ್ಸವದ ಕಾರ್ಯಾಲಯದ ಉದ್ಘಾಟನೆ ಸೆ.28ರಂದು ಜರಗಿತು.

ಕಾರ್ಯಕ್ರಮದ ಅಮುಖ್ಯ ಅತಿಥಿಯಾಗಿದ್ದ ಮಂಗ್ಲಿಮಾರ್ ದೈವ ಸಾನಿಧ್ಯದ ಮೊಕ್ತೇಸರ ರವಿಶಂಕರ್ ಶೆಟ್ಟಿ ಬಡಾಜೇಗುತ್ತು ಮಾತನಾಡಿ  ದೇವರ ಅನುಗ್ರಹವಿದ್ದರೆ ಮಾತ್ರ ನಮ್ಮ ಬದುಕಲ್ಲಿ ದೇವಾಲಯಗಳನ್ನು ಕಟ್ಟುವ ದೇವಾಲಯಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗುವ ಅವಕಾಶಗಳು ಒದಗಿ ಬರುತ್ತದೆ. ನಾವು ಮಾಡುವುದು ಏನು ಇಲ್ಲ ಬದಲಾಗಿ ಭಗವಂತನ ಇಚ್ಛೆಯಂತೆ ಎಲ್ಲಾ ಕಾರ್ಯಗಳು ನಡೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉದ್ಯಮಿಗಳು ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಬಂಟ್ವಾಳದ ಮಾಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಡಾ. ಬಿ ರಮೇಶಾನಂದ ಸೋಮಾಯಾಜಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಲೋಕನಾಥ್ ಶೆಟ್ಟಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಕೇಶ್ ಮಲ್ಲಿ, ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ರಾಮಚಂದ್ರರಾವ್ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಇಂದಿರೇಶ್, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಎರಡು ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ರಚನೆಯಾದ ಮಹಿಳಾ ವೇದಿಕೆಯ ಪ್ರಧಾನ ಸಂಚಾಲಕರಾಗಿ ಆಶಾ ಪ್ರಸಾದ್ ನ್ಯಾಯವಾದಿಗಳು ಮತ್ತು ಉಪ ಸಂಚಾಲಕರಾಗಿ ಸುಷ್ಮಾ ಚರಣ್ ಆಯ್ಕೆಯಾದರು. ಆರು ಸಹ ಸಂಚಾಲಕರ ಆಯ್ಕೆಯೂ ನಡೆಯಿತು. ಪ್ರಾರಂಭದಲ್ಲಿ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜತೆ ಕಾರ್ಯದರ್ಶಿ ಮಂಜು ವಿಟ್ಲ ವಂದಿಸಿದರು.

LEAVE A REPLY

Please enter your comment!
Please enter your name here