ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ ಮಹಾಸಭೆ

0

ಬಂಟ್ವಾಳ: ದ. ಕ. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ ಮಹಸಭೆಯು ಸೆ.15ರಂದು ಬಿರ್ವ ಸೆಂಟರ್‌ನ ಆರ್ಕಿಡ್ ಮಿನಿಹಾಲ್‌ನಲ್ಲಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಅವರು ಮಾತನಾಡಿ ಸಂಘವು ಪ್ರಸ್ತುತ ಲಾಭದಲ್ಲಿ ಮುಂದುವರೆಯುತಿದ್ದು ಪ್ರಥಮ ಬಾರಿಗೆ ಸದಸ್ಯರಿಗೆ ಶೇ. 8ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಮೂರ್ತೆದಾರರ ಪ್ರಾಥಮಿಕ ಸಹಕಾರಿ ಸಂಘಗಳು ಲಾಭಗಳಿಗೆ ಸೃಜಿಸುವ ಕ್ಷೇಮಾನಿಧಿಯನ್ನು ಹಾಗೂ ಠೇವಣಿಗಳನ್ನು ಮಹಾಮಂಡಲದಲ್ಲಿ ಹೂಡಿಕೆ ಮಾಡುವಂತೆ ವಿನಂತಿಸಿದರು. ಮುಂದಿನ ವರ್ಷಗಳಲ್ಲಿ ಮಹಾಮಂಡಲದ ವತಿಯಿಂದ ಶಾಖೆ ತೆರೆಯುವ ಬಗ್ಗೆ ಯೋಜನೆ ರೂಪಿಸಲಾಗುವುದು, ಹಾಗೂ ಸಮಾಜದವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಮಹಾಮಂಡಲಕ್ಕೆ ಶೀಘ್ರವಾಗಿ ಸ್ವಂತ ಕಟ್ಟಡ ಖರೀದಿಸುವ ಯೋಜನೆಯ ಬಗ್ಗೆ ಸಭೆಯಲ್ಲಿ ತಿಳಿಸಿದರು. ಪ್ರಾಥಮಿಕ ಸಹಕಾರಿ ಸಂಘಗಳು ಬ್ಯಾಂಕಿಂಗ್ ಮಾಡುವಲ್ಲಿ ಪ್ರಯತ್ನಿಸಬೇಕು ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಮಹಾಮಂಡಲದ ವತಿಯಿಂದ ನೀಡುವುದಾಗಿ ತಿಳಿಸಿದರು. ಎಲ್ಲಾ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಮಹಾಮಂಡಲಕ್ಕೆ ಕನಿಷ್ಠ ೧೦ ಮಂದಿ ಸದಸ್ಯರನ್ನು ಸೇರ್ಪಡೆಗೊಳಿಸುವಂತೆ ವಿನಂತಿಸಿದರು.
ಉತ್ತಮ ವ್ಯವಹಾರ ಮಾಡುವ ಅಲಂಕಾರು ಮೂರ್ತೆದಾರರ ಸಹಕಾರ ಸಂಘ, ಕುಂಬ್ರ ಮೂರ್ತೆದಾರರ ಸಹಕಾರ ಸಂಘವನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ಅಣ್ಣಿ ಪೂಜಾರಿ, ಪುರುಷ ಎನ್. ಸಾಲ್ಯಾನ್, ವಿಶ್ವನಾಥ ಪೂಜಾರಿ, ಬೇಬಿ ಕುಂದರ್, ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ, ಹರೀಶ್ ಸುವರ್ಣ, ಉಪಾ ಅಂಚನ್, ಶೈಲಜಾ, ವಿಶ್ವನಾಥ ಬಿ., ಶಿವಪ್ಪ ಸುವರ್ಣ ಉಪಸ್ಥಿತರಿದ್ದರು.


ಸಂಘದ ನಿರ್ದೇಶಕರಾದ ವಿಜಯ್ ಕುಮಾರ್ ಸೊರಕೆ ಸ್ವಾಗತಿಸಿದರು, ಸಂಘದ ಕಾರ್ಯದರ್ಶ ಕಿಶೋರ್ ಕುಮಾರ್, ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು, ಆರ್. ಸಿ. ನಾರಾಯಣ್ ವಂದಿಸಿದರು.

LEAVE A REPLY

Please enter your comment!
Please enter your name here