ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾದ ವತಿಯಿಂದ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಆದರ್ಶ ಅಂಗನವಾಡಿ ಕಾರ್ಯಕ್ರಮವನ್ನು ನರಿಕೊಂಬು ಮಹಾಶಕ್ತಿ ಕೇಂದ್ರದ ಗೊಳ್ತಮಜಲು ಗ್ರಾಮದ ಕಲ್ಲಡ್ಕ ಶಾಲಾ ಅಂಗನವಾಡಿಯನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮವನ್ನು ಶಾಸಕರಾದ ರಾಜೇಶ್ ನಾಯ್ಕ್ ದೀಪ ಬೆಳಗುವ ಮೂಲಕ ಸೆ.17ರಂದು ಉದ್ಘಾಟಿಸಿದರು.
ಆ ಬಳಿಕ ಮಾತನಾಡಿದ ಶಾಸಕರು ವಿಶ್ವನಾಯಕ ನರೇಂದ್ರ ಮೋದಿಯವರ ಕನಸನ್ನು ಸಾಕಾರ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅಂಗನವಾಡಿಗೆ ಬೇಕಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದರು .ಮತ್ತು ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಡನ್ನು ಬೇಬಿ ಹಾರ್ದಿವಿಗೆ ಶಾಸಕರು ವಿತರಣೆ ಮಾಡಿದರು,ಈ ಕಾರ್ಯಕ್ರಮದಲ್ಲಿ ಎರಡು ವಿಶೇಷಚೇತನ ಮಕ್ಕಳನ್ನು ಗೌರವಿಸಲಾಯಿತು .
ಈ ಕಾರ್ಯಕ್ರಮದಲ್ಲಿ ಮಂಡಲದ ಶಾಸಕ ದೇವಪ್ಪ ಪೂಜಾರಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ ಮತ್ತು ರವಿ ಶ್ ಶೆಟ್ಟಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ರಾಜ್ಯ ನಿರ್ದೇಶಕಿ ಸುಲೋಚನಾ ಜಿಕೆ ಭಟ್ ಚಂದ್ರಾವತಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತೀಯ ಚೌಟ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸುಧಾ,ವೀರಕಂಬದ ಪುನರ್ವಸತಿ ಕಾರ್ಯಕರ್ತೆ ಕುಸುಮಾವತಿ, ಹಿರಿಯರಾದ ಕಮಲಾಕ್ಷಿ , ಪಂಚಾಯತ್ ಅಧ್ಯಕ್ಷ ಅಭಿಷೇಕ್ ,ಉಪಾಧ್ಯಕ್ಷೆ ಲಕ್ಷ್ಮಿ ವಿ ಪ್ರಭು ,ಗೌರವಾನ್ವಿತ ಪಂಚಾಯತ್ ಸದಸ್ಯರು ಮತ್ತು ಶ್ರೀ ಶಕ್ತಿ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಂಗನವಾಡಿ ಟೀಚರ್ ಯಮುನಾ ಮಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಖಿತಾ ನೆರವೇರಿಸಿ. ಧನ್ಯವಾದವನ್ನು ಪ್ರಧಾನ ಕಾರ್ಯದರ್ಶಿ ಸೀಮಾ ಮಾಡಿದರು.