‘ಭಾಷೆಯು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತದೆ’ – ರವೀಂದ್ರ ಡಿ

0

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ‘ಹಿಂದಿ ದಿವಸ್’ ಕಾರ್ಯಕ್ರಮವನ್ನು ತುಳಸಿದಾಸರ ಭಾವಚಿತ್ರವನ್ನು ಅನಾವರಣ ಮಾಡುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಸಭಾ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ ಮಾತನಾಡಿ , ಭಾಷೆಯು ಏಕತೆಯನ್ನು ಸಾರುತ್ತದೆ.  ಪ್ರತಿಯೊಂದು  ಭಾಷೆಯಲ್ಲಿ ಮೌಲ್ಯಗಳು ಇರುತ್ತದೆ ಹೀಗಾಗಿ ಎಲ್ಲಾ ಭಾಷೆಯ ಜ್ಞಾನವನ್ನು ಪಡೆಯುವುದರಿಂದ ಭಾರತೀಯ ಸಂಸ್ಕೃತಿಯನ್ನು ರೂಢಿಸಿಕೊಳ್ಳಬಹುದು ಎಂದರು.  ಭಾಷೆಯಿಂದ ನಮ್ಮ ಭಾವನೆಗಳನ್ನು ಹಂಚಬಹುದು. ಹಿಂದಿ ಭಾಷೆಯನ್ನು ಕಲಿಯುವ ಸಂಕಲ್ಪಗೈಯೋಣ ಎಂದು ಮಕ್ಕಳನ್ನು ಹುರಿದುಂಬಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ ಶೆಟ್ಟಿ ಹಿಂದಿ ಭಾಷೆ ಹಾಗೂ ಹಿಂದಿ ದಿವಸದ ಮಹತ್ವದ ಕುರಿತು ತಿಳಿಸಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆಗೈದರು .ವಿದ್ಯಾರ್ಥಿನಿ ನಿಧಿ ಎಸ್ ಸ್ವಾಗತಿಸಿದರು. ಮೊಹಮ್ಮದ್  ಇಸ್ಮಾಯಿಲ್ ಸಹಲ್ ಪ್ರಸ್ತಾವನೆಗೈದರು, ಭುವಿ ವಂದಿಸಿದರು. ಫಾದಿಲ್ ಉಮ್ಮರ್, ಆಕಾಶ್ , ಸಮೀಕ್ಷಾ ಹಾಗೂ ತೃಪ್ತಿ ಕಾರ್ಯಕ್ರಮ   ನಿರೂಪಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

                                        

LEAVE A REPLY

Please enter your comment!
Please enter your name here