ಭಾರತೀಯ ಮಜ್ದೂರ್ ಸಂಘ ಬಿಸಿರೋಡ್ ತಾಲೂಕು ಕಛೇರಿ ಕಾರ್ಮಿಕರ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮ

0

ಬಂಟ್ವಾಳ : ಭಾರತೀಯ ಮಜ್ದೂರ್ ಸಂಘ ಬಿಸಿರೋಡ್ ತಾಲೂಕು ಕಛೇರಿ ಕಾರ್ಮಿಕರ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮವು ಲಯನ್ಸ್ ಸೇವಾ ಮಂದಿರದಲ್ಲಿ ದಿ.4ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ , ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರು ಭಾಗವಹಿಸಿದರು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕರೋನದ ಸಂದರ್ಭದಲ್ಲಿ ಕಾರ್ಮಿಕರ ಹಿತ ದೃಷ್ಟಿಯಿಂದ ಕೈಗೊಂಡ ಕಾರ್ಯಗಳು ಯೋಜನೆಗಳು ಅದರಿಂದ ಸಾರ್ವಜನಿಕರಿಗೆ ಆದ ಲಾಭಗಳ ಕುರಿತಾಗಿ ವಿವರಿಸಿದರು. ಈ ಕುರಿತು ತನ್ನ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ2018ರಿಂದ
2022ರವರೆ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಯಲ್ಲಿ ವೈದ್ಯಕೀಯ 89 ಅರ್ಜಿಗಳಲ್ಲಿ 8.90ಲಕ್ಷ , ಪಿಂಚಣಿ 179 ಅರ್ಜಿಗಳಲ್ಲಿ 3.58ಲಕ್ಷ , ಮದುವೆ 917 ಅರ್ಜಿಗಳಲ್ಲಿ 4.59ಕೋಟಿ, ಹೆರಿಗೆ 3 ಅರ್ಜಿಗಳಲ್ಲಿ 90ಸಾವಿರ, ಅಂತ್ಯ ಸಂಸ್ಕಾರ ವೆಚ್ಚ ಹಾಗೂ ಅನುಗ್ರಹ ರಾಶಿ 154 ಅರ್ಜಿಗಳಲ್ಲಿ 83.16ಲಕ್ಷ, ತಾಯಿ ಮಗು ಸಹಾಯಸ್ತ2 ಅರ್ಜಿಗಳಲ್ಲಿ 36ಸಾವಿರ, ಶೈಕ್ಷಣಿಕ ಧನ ಸಹಾಯ 3766ರಲ್ಲಿ2.30ಕೋಟಿ,ಈ ಸಲದ್ದು ಸೇರಿ ಒಟ್ಟು 10ಕೋಟಿ91ಲಕ್ಷದ40000 ಸಾವಿರದಷ್ಟು ಕ್ಲೈಮ್ ಮಾಡಲಾಗಿದ್ದು ಅಂತೆಯೇ ಕಾರ್ಮಿಕರಿಗೆ ಬಾರ್ ಬೆಂಡಿಂಗ್ ಕಿಟ್ 162, ಪೈಂಟಿಂಗ್ ಕಿಟ್ 638, ಪ್ಲಂಬರ್ ಟೂಲ್ ಕಿಟ್12, ಕಾರ್ಪೆಂಟರ್ ಟೂಲ್ ಕಿಟ್ 20, ಎಲೆಕ್ಟ್ರಿಷಿಯನ್ ಕಿಟ್ 30, ಆಹಾರ ಧಾನ್ಯಗಳ ಕಿಟ್ 10000, ಸುರಕ್ಷಾ ಕಿಟ್ 13475, ಇಮಿನಿಟಿ ಬೂಸ್ಟರ್ ಕಿಟ್ 6500, ಮೇಶನ್ ಕಿಟ್ 840 ವಿತರಿಸಲಾಗಿತ್ತು ಕಾರ್ಮಿಕರಿಗಾಗಿ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದ್ದು ಮುಂದೆ ಕಟ್ಟಡ ಕಾರ್ಮಿಕರಿಗಾಗಿ ಮನೆ ಕಟ್ಟಲು ದೊರಕುವ ಸಹಾಯಧನ ದೊರಕಿಸಿ ಕೊಡುವಲ್ಲಿ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದರು. ಮಜ್ದೂರು ಸಂಘವೂ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಬಹಳ ಶ್ರಮಿಸುತ್ತಿದೆ. ಕಾರ್ಮಿಕರಿಗೆ ಸವಲತ್ತುಗಳನ್ನು ದೊರಕಿಸಿ ಕೊಡುವಲ್ಲಿ ನಿರಂತರ ಶ್ರಮಿಸುತ್ತಿರುವ ಭಾರತೀಯ ಮಜ್ದೂರ್ ಸಂಘದ ಜೊತೆ ತಾವು ಸದಾ ಇದ್ದು ಕಾರ್ಮಿಕರಿಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತಿರುವ ಭಾರತೀಯ ಮಜ್ದೂರ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಬಿಎಂಎಸ್ ನ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಹಿರಿಯ ಕಾರ್ಮಿಕ ಮುತ್ಸದ್ದಿ ಕೆ.ವಿಶ್ವನಾಥ ಶೆಟ್ಟಿ ಮಾತಾಡಿ, ಸಂಘಟನೆಯನ್ನು ಬೆಳೆಸಿ ಉಳಿಸುವ ದೃಷ್ಟಿಯಿಂದ ಫಲಾನುಭವಿ ಸದಸ್ಯರ ಸಹಕಾರ ಅಗತ್ಯ ತಮ್ಮ ಸಹಕಾರದಿಂದ ಸಹಾಯದಿಂದ ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸಿ ಕಾರ್ಮಿಕರ ಶ್ರೇಯ ಅಭಿವೃದ್ಧಿಗೋಸ್ಕರ ಇನ್ನಷ್ಟು ಗಟ್ಟಿಯಾಗಿ ನಿಂತು ಶ್ರಮಿಸಬಹುದು ಎಂದರು.

ರಾಜ್ಯ ಬಿ ಎಂ ಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿ ಮಜ್ದೂರು ಸಂಘದಿಂದ ಆಗುತ್ತಿರುವ ಉಪಯೋಗ, ಮುಂದಿನ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ ಹಾಗೂ ಬಿಎಂಎಸ್ ಜಿಲ್ಲಾ ಅಧ್ಯಕ್ಷ ಪಿ.ಬಾಸ್ಕರ್ ರಾವ್ ನ್ಯಾಯವಾದಿಗಳು ಸುಳ್ಯ ,ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು, ನ್ಯಾಯವಾದಿಗಳು ಬಿ.ಸಿ ರೋಡ್, ಜಯ ರಾಮ ರೈ ,ಬಂಟ್ವಾಳ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸುಪ್ರೀತ್ ಆಳ್ವಾ , ಸಮಾಜ ಸೇವಾ ಸಹಕಾರಿ ಬ್ಯಾಂಕ್ ಬಂಟ್ವಾಳ ಅಧ್ಯಕ್ಷ ಸುರೇಶ್ ಕುಲಾಲ್ , ಮಾಲಕರು ಸೌತಡ್ಕ ಫರ್ನಿಚರ್ ಬಂಟ್ವಾಳ ನಾಗೇಶ್ ಸಾಲಿಯಾನ್, ವಿಶ್ವನಾಥ ಚಂಡ್ತಿಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಿನೇಶ್ ಕನಪಾದೆ ನಿರೂಪಿಸಿ, ಬಿಎಂಎಸ್‌ನ ರಿಕ್ಷಾ ಚಾಲಕ ಮುಖಂಡ ವಸಂತಕುಮಾರ್ ಸ್ವಾಗತಿಸಿ, ಸದಾನಂದ ಗೌಡ ಹಳೆಗೇಟು ವಂದಿಸಿದರು.

ನಂತರ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕಾರ್ಯಗಾರವು ನಡೆಯಿತು.

LEAVE A REPLY

Please enter your comment!
Please enter your name here