ಬಂಟ್ವಾಳ: 2022ರ ಮಿಸ್ ದಿವಾ ಯೂನಿವರ್ಸ್ ಕಿರೀಟವನ್ನು ಮುಂಬಯಿಯಲ್ಲಿ ವಾಸ್ತವ್ಯವಿರುವ ಕುರಿಯ ಗ್ರಾಮದ ಸಂಪ್ಯದಮೂಲೆಯ ದಿವಿತಾ ರೈ ಮುಡಿಗೇರಿಸಿಕೊಂಡಿದ್ದು `ಮಿಸ್ ಯುನಿವರ್ಸ್-2022ʼ ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಈಕೆ ಪ್ರತಿನಿಧಿಸಲಿದ್ದಾರೆ.
ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಫೇಮಸ್ ಸ್ಟುಡಿಯೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಿಸ್ ಯುನಿವರ್ಸ್ 2022 ಹರ್ನಾಝ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯುನಿವರ್ಸ್ ಲಾರಾದತ್ತಾ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. 2021ರ ಮಿಸ್ ಯುನಿವರ್ಸ್ ಗೆದ್ದ ಹರ್ನಾಜ್ ಸಂಧು ಆ.28ರಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 23 ವರ್ಷದ ದಿವಿತಾ ರೈ ಅವರಿಗೆ ಮಿಸ್ ದಿವಾ ಯುನಿವರ್ಸ್ 2022ರ ಕಿರೀಟ ತೊಡಿಸಿದ್ದಾರೆ. ತೆಲಂಗಾಣದ ಸುಂದರಿ ಪ್ರಜ್ಞಾ ಅಯ್ಯಗಾರಿ ಅವರು ಮಿಸ್ ದಿವಾ ಸೂಪರ್‌ನ್ಯಾಷನಲ್ 2022 ಆಗಿ ಆಯ್ಕೆಯಾಗಿದ್ದಾರೆ. ಮಿಸ್ ಯುನಿವರ್ಸ್‌ನ ಅಧಿಕೃತ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹರ್ನಾಜ್ ಸಂಧು ಅವರು ದಿವಿತಾ ರೈ ಅವರಿಗೆ ಕಿರೀಟ ತೊಡಿಸುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುತ್ತಾರೆ. ಕುರಿಯ ಗ್ರಾಮದ ಸಂಪ್ಯ ಸಂಪ್ಯದಮೂಲೆಯ ದಿಲೀಪ್ ರೈ ಹಾಗೂ ಪವಿತ್ರಾ ರೈ ದಂಪತಿ ಪುತ್ರಿ ದೀವಿತಾ ರೈಯವರು ಇಂಡಿಯನ್ ಆಯಿಲ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಅವರು ಕಳೆದ ಏಳು ವರ್ಷಗಳಿಂದ ಮುಂಬಯಿಗೆ ವರ್ಗಾವಣೆಗೊಂಡಿದ್ದು ಅಲ್ಲಿಯೇ ವಾಸ್ತವ್ಯವಿದ್ದಾರೆ. ದಿಲೀಪ್ ರೈಯವರು ಮೂರು ತಿಂಗಳ ಹಿಂದೆ ನಿವೃತ್ತಿ ಹೊಂದಿರುತ್ತಾರೆ.
ತಂದೆಯ ಉದ್ಯೋಗದಲ್ಲಿನ ವರ್ಗಾವಣೆಗಳಿಂದಾಗಿ ಗುಜರಾತ್, ಮಧ್ಯಪ್ರದೇಶ, ಕಲ್ಕತ್ತಾ, ಬೆಂಗಳೂರು ಹಾಗೂ ಮುಂಬೈಯಲ್ಲಿ ವಿದ್ಯಾಭ್ಯಾಸ ಪಡೆದಿರುವ ದೀವಿತಾ ರೈ ಪ್ರಸ್ತುತ ಮುಂಬೈಯ ಜೆ.ಜೆ.ಕಾಲೇಜ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗರಾಗಿದ್ದು ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿರುವ ಇವರು ೨೦೧೭ರ ಒಳಾಂಗಣ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದರು.
ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆ ಭಾರತವನ್ನು ಪ್ರತಿನಿಧಿಸಲಿರುವ ಸಂಪ್ಯದ ದೀವಿತಾ ರೈ