ಬಂಟ್ವಾಳ :ಸಣ್ಣ ಮತ್ತು ದೊಡ್ಡ ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ ಮಹಾಸಭೆಯು ಬಿ.ಸಿ.ರೋಡ್ ನ ರಕ್ತೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ನ್ಯಾಯವಾದಿ ರಮಾನಾಥ ಕಾರಂದೂರು ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ,ಎಂ.ಕೆ.ಖಾದರ್ ಹಾಗೂ ಮಾಜಿ ಪುರಸಭಾ ನಾಮ ನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ಉಪಸ್ಥಿತಿಯಲ್ಲಿ ಜರಗಿತು.ಮಹಾಸಭೆಯಲ್ಲಿ 2022-23ನೇ ಸಾಲಿನ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನ ನೇಮಿಸಲಾಯಿತು.
ಅಧ್ಯಕ್ಷರಾಗಿ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು, ಉಪಾಧ್ಯಕ್ಷರಾಗಿ ನಾರಾಯಣಕುಲಾಲ್, ಕಾರ್ಯದರ್ಶಿಯಾಗಿ ದೀರಜ್ದಾಸ್, ಜತೆ ಕಾರ್ಯದರ್ಶಿಯಾಗಿ ಹರೀಶ್, ಕೋಶಾಧಿಕಾರಿಯಾಗಿ ಅಬ್ದುಲ್ ಲತೀಫ್ ಆಯ್ಕೆಯಾದರು.ಕಾರ್ಯಕಾರಿ ಸಮತಿ ಸದಸ್ಯರಾಗಿ ನಾರಾಯಣದಾಸ್, ಆದಂ, ಇಮ್ತಿಯಾಜ್, ಸುರೇಶ್‌ಗೌಡ, ವರದ್‌ರಾಜ್, ರ ವೀಂದ್ರ, ಅಶೋಕ, ಲೂಯಿಸ್ ಮೊಂತೆರೋ, ಜಯಂತ, ರೋಬರ್ಟ್‌ಡಿಸೋಜ, ಇಲಿಯಾಸ್, ಜಗದೀಶ್, ಚರಣ್, ವಿಠಲ ಪೂಜಾರಿ, ಅಬ್ಬಾಸ್, ರಾಜೇಶ್ ಮತ್ತು ಹನೀಫ್ ಆಯ್ಕೆಯಾದರು.