ಕಟೀಲು ಮೇಳದ ಹರಿಕೆ ಸೇವಾ ಆಟವನ್ನು ಮುಂದಿನ ತಿರುಗಾಟದಿಂದ ಕಾಲಮಿತಿಗೊಳಪಡಿಸಿ ಕೈಗೊಂಡ ನಿರ್ಧಾರದಿಂದ ಆಗುವ ಸಾಧಕ ಭಾಧಕ … ಒಂದು ವಿಶ್ಲೇಷಣೆ

0

ಇನ್ನು ಮುಂದಕ್ಕೆ ಯಕ್ಷಗಾನದ ರೂಢಿಯಲ್ಲಿದ್ದ ಪರಂಪರೆಯ ಪೌರಾಣಿಕ ಕತೆಗಳು ಕಡಿತ ಗೊಂಡು ಪ್ರೇಕ್ಷಕರಿಗೆ ಕತೆಯ ಪರಿಚಯ ಅರ್ಧoಬರ್ದ ಆಗಬಹುದು!!
ಯಕ್ಷಗಾನದಲ್ಲಿ 4 ಕಾಲಗಳಿವೆ(ವೇಗ)ವಾಹನಕ್ಕೆ ಗೇರ್ ಇದ್ದ ಹಾಗೆ ಇನ್ನು ಟಾಪ್ ಗೇರ್ ನಲ್ಲೆ ಓಡ ಬಹುದು ಕಥೆಗೆ ಅಪಘಾತ ಖಂಡಿತ ಆಗಿಯೇ ಆಗುವುದು. ಹಳೆಯ ಕೆಲವು ಪ್ರಸಂಗಗಳು ಅಂಗಾoಗ ಕಸಿ ಮಾಡಿ ಕೊಳ್ಳಲೇ ಬೇಕು. ಇಲ್ಲವೇ ಹೊಸ ಕವಿಶ್ರೇಷ್ಠರು ಪ್ರಚಲಿತಕ್ಕೆ ಬಂದು ಪ್ರಸಂಗಗಳಿಗೆ ಕಾಯಕಲ್ಪ ಮಾಡಬಹುದು. ಹಿರಿಯ ಅನುಭವಿ ಕಲಾವಿದರ ದ್ರಿಷ್ಟಿಯಲ್ಲಿ ಆ ಪ್ರಸಂಗ ವಿರೂಪವಾಯ್ತು ಎಂಬ ಅಪಖ್ಯಾತಿಯು ಬಂದೇ ಬರಬಹುದು. ಕಲಾವಿದ ಬಾಲ್ಯದಲ್ಲಿ ಮೇಳದ ತಿರುಗಾಟಕ್ಕೆ ಸಿದ್ಧನಾದ ಬಾಲಕ ತುಂಬಾ ಅವಕಾಶ ವಂಚಿತನಾಗುತ್ತಾನೆ. ತನ್ನ ಪ್ರತಿಭೆ ಅನಾವರಣ ಮಾಡಲು ಇನ್ನು ಕಷ್ಟಪಡಬೇಕಾಗುತ್ತದೆ. ವೃತ್ತಿ ಪರ ಕಲಾವಿದನಾದವನು ಸಂಜೆ ಮನೆಯಿಂದ ಹೊರಡ ಬೇಕಾದವ ಮದ್ಯಾಹ್ನವೇ ಮನೆ ಬಿಡಬೇಕು ಪ್ರದರ್ಶನ ಸ್ಥಳವನ್ನು ಸಮಯಕ್ಕೆ ಸರಿಯಾಗಿ ತಲುಪಲೇ ಬೇಕು.
ಹವ್ಯಾಸಿ ಉಪವೃತ್ತಿ ಮಾಡುತ್ತಿರುವ ವೃತ್ತಿ ಪರ ಕಲಾವಿದನಿಗೆ ಒಂದೇ ಆಯ್ಕೆ ತಾನು ಮಾಡುತ್ತಿರುವ ವೃತ್ತಿಗೆ ವಿದಾಯ ಹೇಳುವುದು ಇಲ್ಲವೇ ಶಾಶ್ವತ ಯಕ್ಷಗಾನ ವೃತ್ತಿಗೆ ವಿದಾಯ ಘೋಷಿಸುವುದು. ಪ್ರೇಕ್ಷಕರಿಗೆ ನಷ್ಟ ಪೂರ್ವ ರಂಗ, ಪರಂಪರೆಯ ಕೆಲವು ಸನ್ನಿವೇಶಗಳು ನಿಧಾನವಾಗಿ ರಂಗದಿಂದ ಜಾರಿ ಹೋಗುವುದು.ಯಕ್ಷಲೋಕ (ಭ್ರಾಮಕ)ಪ್ರವೇಶ ಮಾಡಲು ಅಸಾಧ್ಯ ಆಗಬಹುದು. ಸೇವಾರ್ಥಿಗಳಿಗೆ ನಿರೀಕ್ಷೆ ಮೀರಿ ಜನ ಸೇರಬಹುದು. ವ್ಯವಸ್ಥೆ ಸ್ವಲ್ಪ ಗೊಂದಲ ಆಗಬಹುದು( ಊಟ ಮತ್ತು ಆಸನ) ಅನಾರೋಗ್ಯಪೀಡಿತರು, ವೃದ್ದರು, ಮಕ್ಕಳು ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಸೇರ ಬಹುದು.ಮಾತೆಯರು ಧಾರಾವಾಹಿ ಗುಂಗಿನಿoದ ಹೊರಬರುವ ಪ್ರಯತ್ನ ಮಾಡಬಹುದು(ಅನುಮಾನ) ದೂರದಿಂದ ಬಂದ ಹತ್ತಿರದ ನೆಂಟರನ್ನು ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಲು ಪರದಾಡ ಬೇಕಾಗಬಹುದು. ಸೇವಾರ್ಥಿ ಗಳ ಮನೆ ವಠಾರದಲ್ಲಿ ಮೋಜು ಮಸ್ತಿ ಸ್ವಲ್ಪ ತಲೆ ಎತ್ತ ಬಹುದು.

ಸರಪಾಡಿ ಅಶೋಕ ಶೆಟ್ಟಿ ಯಕ್ಷಗಾನ ಕಲಾವಿದ

9448445990:9008161491

LEAVE A REPLY

Please enter your comment!
Please enter your name here