ಬಂಟ್ವಾಳ ವಿಧಾನ ಸಭಾ ಕ್ಷೇತ್ರ ; 102.05 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

0


ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಹದಿನೆಂಟು ಸ್ಥಳಗಳಲ್ಲಿ ಒಟ್ಟು ರೂ. 102. 05 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಆ. 23ರಂದು ಶಿಲಾನ್ಯಾಸ ನೆರವೇರಿಸಿದರು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ದೇವಳದ ಹಿಂಬದಿ ಚರಂಡಿ ನಿರ್ಮಾಣ ಕಾಮಗಾರಿ 40 ಲಕ್ಷ ರೂ. ವೆಚ್ಚದ ಕಾಮಗಾರಿ, ಪೊಳಲಿ ರಾಮಕೃಷ್ಣ ತಪೋವನ ರಸ್ತೆ ಅಭಿವೃದ್ದಿ ರೂ. 10 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ದಿ ಇಲಾಖೆಯ ರೂ. 28 ಕೋಟಿ ರೂ. ವೆಚ್ಚದ 231 ರಸ್ತೆ ಕಿರು ಅಭಿವೃದ್ದಿ ಕಾಮಗಾರಿಗಳಿಗೆ ಇದೇ ಸಂದರ್ಭ ಚಾಲನೆ ನೀಡಲಾಯಿತು.
ಅರಳ ದ್ವಾರದ ಬಳಿ ಮೂಲರಪಟ್ಣ- ಸೊರ್ನಾಡು ರಸ್ತೆ 4.10 ಕೋ. ರೂ., ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ರಸ್ತೆ 1.25 ಕೋ. ರೂ., ರಾಯಿ -ಅಣ್ಣಳಿಕೆ ರಸ್ತೆ -2 ಕೋ. ರೂ., ಮೈಂದಾಳ ಮಣಿಹಳ್ಳ -ಸರಪಾಡಿ -ಬಜ ರಸ್ತೆ – 7ಕೋ. ರೂ. , ಸರಪಾಡಿ -ಪೆರ್ಲ -ಬೀಯಪಾದೆ ರಸ್ತೆ 3 ಕೋ. ರೂ. ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಯಿತು.
ಮುಲ್ಕಾಜೆಮಾಡ ಗ್ರಾಮದ ಕುಂಟಾಲಪಲ್ಕೆ -ಉಳಿ ರಸ್ತೆ ಕಾಮಗಾರಿ 7ಕೋ. ರೂ. , ಪಣೋಲಿಬೈಲು : ಮಾರ್ನಬೈಲು -ಮಂಚಿ-ಸಾಲೆತ್ತೂರು ರಸ್ತೆ -13 ಕೋ. ರೂ., ಮೆಲ್ಕಾರ್ -ಮಾರ್ನಬೈಲು ರಸ್ತೆ -2.40 ಕೋ. ರೂ., ಬೊಳ್ಳಾಯಿ -ಕಂಚಿಲ-ಮಂಚಿ ರಸ್ತೆ -2ಕೋ. ರೂ.
ನರಹರಿ ಪರ್ವತ : ನರಹರಿ ಶ್ರೀ ಸದಾಶಿವ ದೇವಸ್ಥಾನ ರಸ್ತೆ – 2ಕೋ. ರೂ., ಕಲ್ಲಡ್ಕ -ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ರಸ್ತೆ – 3 ಕೋ. ರೂ. , ಕೋಡಪದವು -ಮಂಗಳಪದವು ರಸ್ತೆ -1.50 ಕೋ. ರೂ. ,
ಮಾಣಿ ಗ್ರಾಮದ ಮಾಣಿ ಶ್ರೀ ಉಳ್ಳಾಳ್ತಿ ಮಾಡ ರಸ್ತೆ – 2 ಕೋ. ರೂ., ಸುಧೆಕಾರು -ಕಕ್ಕೆ ಮಜಲು -ಕಾಪಿಕಾಡು ರಸ್ತೆ : 4.95 ಕೋ. ರೂ. ನರಿಕೊಂಬು – ದಾಸಕೋಡಿ ರಸ್ತೆ 4.95 ಕೋ. ರೂ., ಬೆಂಜನಪದವು – ಪಿಲಿಬೊಟ್ಟು ರಸ್ತೆ – 2.50 ಕೋ. ರೂ. ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.


LEAVE A REPLY

Please enter your comment!
Please enter your name here