ಅಲ್ಲಿಪಾದೆ: ಸಿರಿಧಾನ್ಯಗಳ ಮಾಹಿತಿ, ಪ್ರಾತ್ಯಕ್ಷಿಕೆ

0

ಬಂಟ್ವಾಳ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಇದರ ವತಿಯಿಂದ ಶ್ರೀ ರಾಮ ಭಜನಾ ಮಂದಿರ ಅಲ್ಲಿಪಾದೆಯಲ್ಲಿ ಶ್ರೀ ರಾಮ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ,ಸಿರಿ ಧಾನ್ಯಗಳ ಬಳಕೆ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಒಕ್ಕೂಟದ ಅಧ್ಯಕ್ಷ ನವೀನ್ ಸಿರಿ ದಾನ್ಯ ದ ಮಾಹಿತಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಸಿದರು. ಸರಪಾಡಿ ಪಂಚಾಯತ್ ಅಧ್ಯಕ್ಷ ಲೀಲಾವತಿಯವರು ಸಿರಿ ದಾನ್ಯದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ವನ್ನು ನವಣೆಯಿಂದ ತಯಾರಿಸಿದ ದೋಸೆಯನ್ನು ಹೊಯ್ಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ದ. ಕನ್ನಡ ಜಿಲ್ಲೆಯ ಸಿರಿ ದಾನ್ಯ ಮಾರುಕಟ್ಟೆ ಅಧಿಕಾರಿ ಸಂದೀಪ್ ರವರು ಸಿರಿ ದಾನ್ಯದ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ವಲಯ ದ ಮೇಲ್ವಿಚಾರಕರಾದ ಕೇಶವ ನಾಯ್ಕ್ ಇವರು ಕಾರ್ಯಕ್ರಮ ದ ಬಗ್ಗೆ ಪ್ರಾಸ್ತವಿಕ ಮಾತನ್ನು ಆಡಿದರು. ಬಂಟ್ವಾಳ ತಾಲೂಕಿನ ಜ್ಞಾನವಿಕಾಸ ಸಮನ್ವಯಅಧಿಕಾರಿ ಸಪ್ನಾ ಕಾರ್ಯಕ್ರಮವನ್ನು ನಿರೂಪಿಸಿ, ಅಲ್ಲಿಪಾದೆ ಸೇವಾಪ್ರತಿನಿಧಿ ವಸಂತಿ ಯವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.

LEAVE A REPLY

Please enter your comment!
Please enter your name here