ಬಂಟ್ವಾಳ : ದೇಶದಲ್ಲೇ ಮೊದಲ ಬಾರಿಗೆ ಅಪರೂಪದ ” ಉಸ್ನೆಯ ಹಿರುಟ” ಕಲ್ಲು ಹೂವು ಪತ್ತೆ

0

ಬಂಟ್ವಾಳ : ಬಂಟ್ವಾಳದ ಎಸ್.ವಿ.ಎಸ್.ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿನಾಯಕ್ ಕೆ.ಎಸ್‌  ನೇತೃತ್ವದ  ಅರ್ಚನಾ ಆರ್. ಮೇಸ್ತ ಮತ್ತು ಎನ್. ರಾಜೇಶ್ವರಿಯವರನ್ನೊಳಗೊಂಡ ಸಂಶೋಧನಾ ತಂಡ ‘ಉಸ್ನೆಯ ಹಿರುಟ’ ಎಂಬ ಅಪರೂಪದ  ಕಲ್ಲು ಹೂವು ಪ್ರಭೇದವನ್ನುಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಪತ್ತೆಹಚ್ಚಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಗುರುತಿಸಲಾದ ಪ್ರಭೇದ ಎಂದು ಡಾ. ವಿನಾಯಕ್ ತಿಳಿಸಿದ್ದಾರೆ.

ಈ ಪ್ರಭೇದವು ಪಾರ್ಮಿಲಿಯ ಎಂಬ ಕಲ್ಲು ಹೂವಿನ ಜಾತಿಗೆ ಸೇರಿದ್ದಾಗಿದ್ದು, 1500 ಅಡಿಗಿಂತ ಎತ್ತರ ಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತದೆ. ಪಾಚಿ ಮತ್ತು ಶಿಲೀಂಧ್ರಗಳ ಸಂಯೋಗದಿಂದ ಮಾತ್ರ ಉತ್ಪತ್ತಿಯಾಗುವ  ಇದು ವಾತಾವರಣದ ಮಾಲಿನ್ಯಕ್ಕೆ ಬೇಗ ನಶಿಸಿಹೋಗುವ ಪ್ರಭೇದವಾಗಿದೆ. ಅತ್ಯಂತ ಕಡಿಮೆ ಮಾಲಿನ್ಯ ಇರುವ ಪ್ರದೇಶದಲ್ಲಿ ಮಾತ್ರ ಅಪರೂಪವಾಗಿ ಇದು ಬೆಳೆಯುತ್ತದೆ. 

ಫಿಲಿಫೈನ್ಸ್, ಅಸ್ಟ್ರೇಲಿಯಾ, ಕ್ಯಾಲಿಫೋರ್ನಿಯ, ಪಶ್ಚಿಮ ಆಫ್ರಿಕಾದಲ್ಲಿ ಕಾಣಸಿಗುವ ಈ ಕಲ್ಲು ಹೂವಿನ ಕುರಿತು, ಜರ್ನಲ್ ಆಫ್ ತ್ರಿಟನ್ ಟ್ಯಾಕ್ಸ್ ಎಂಬ ವಿಜ್ಞಾನ ಪತ್ರಿಕೆಯ ಫೆಬ್ರವರಿ ತಿಂಗಳ ವಿಶೇಷ ಆವೃತ್ತಿಯಲ್ಲಿ ಈ ಕಲ್ಲು ಹೂವಿನ ಕುರಿತ ಲೇಖನ ಪ್ರಕಟವಾಗಿದೆ. ಇದುವರೆಗೆ ಭಾರತದಲ್ಲಿ ಈ ಕುಟುಂಬಕ್ಕೆ ಸೇರಿದ 57  ಕಲ್ಲು ಹೂಗಳ ಪ್ರಭೇಧವನ್ನು ಗುರುತಿಸಲಾಗಿದ್ದು ಈ ಪೈಕಿ 8 ಪ್ರಭೇಧಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ ಎಂದು ಡಾ. ವಿನಾಯಕ್ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here