ಪಾಕಿಸ್ತಾನದ ಹಿಂದೂ ಸಮುದಾಯದ ಸನಾ ರಾಮಚಂದ್ ಗುಲ್ವಾನಿ ಪಂಜಾಬ್ ಪ್ರಾಂತ್ಯದ ಹಸನಾಬ್ಬಲ್ ನ ಸಹಾಯಕ ಆಯುಕ್ತ ಮತ್ತು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಈ ಮೂಲಕ ಪಾಕಿಸ್ತಾನದ ಆಡಳಿತಾತ್ಮಕ ಸೇವೆ ಪಿಎಎಸ್ ಗೆ ಸೇರ್ಪಡೆಗೊಂಡ ಪಾಕಿಸ್ತಾನದ ಹಿಂದೂ ಸಮುದಾಯದ ಮೊದಲ ಸಹಾಯಕ ಆಯುಕ್ತರೆಂಬ ಖ್ಯಾತಿಗೆ ಸನಾ ಪಾತ್ರರಾಗಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಿಗಿರ್ ಪುರ್ ಮೂಲದ ಸನಾ ರಾಮಚಂದ್ 2020ರಲ್ಲಿ ಪಿಎಎಸ್ ತೇರ್ಗಡೆ ಹೊಂದಿದ್ದು ಕಳೆದ ವಾರ ಹಸನಾಬ್ಬಲ್ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.