ಬ್ರಹ್ಮರಕೊಟ್ಲು :51ನೇ ವರ್ಷದ ಏಕಾಹ ಭಜನಾ ಮಹೋತ್ಸವ, ಸ್ಥಳೀಯ ಅಶಕ್ತರಿಗೆ ನೆರವು ಕಾರ್ಯಕ್ರಮ

0

ಉತ್ತಮ ಸಂಸ್ಕಾರದಿಂದ ಸಮಾಜದಲ್ಲಿ ಗೌರವಯುತ ಸ್ಥಾನ: ಪಟ್ಲ ಸತೀಶ ಶೆಟ್ಟಿ

ಬಂಟ್ವಾಳ : ಶ್ರೀ ಮೂಕಾಂಬಿಕಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೊಟ್ಲು ಇದರ 51ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಸಂದರ್ಭದಲ್ಲಿ ಸ್ಥಳೀಯ ಅಶಕ್ತರಿಗೆ ನೆರವು ಕಾರ್ಯಕ್ರಮವು ಜ.06ರಂದು ಶುಕ್ರವಾರ ಸಂಜೆ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯಕ್ಷ ದ್ರುವ ಫೌಂಡೇಶನ್ ನ ಸ್ಥಾಪಕಧ್ಯಕ್ಷ ರಾದ ಖ್ಯಾತ ಭಾಗವತರು,ಪಟ್ಲ ಸತೀಶ್ ಶೆಟ್ಟಿ ಮಾತನಾಡಿ,ವಿದ್ಯೆ ಇಲ್ಲದಿದ್ದರೂ ಬದುಕಬಹುದು, ಉತ್ತಮ ಸಂಸ್ಕಾರವಿಲ್ಲದಿದ್ದರೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಿಲ್ಲ, ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರಯುತ ಶಿಕ್ಷಣ ಸಿಕ್ಕಾಗ ಮುಂದೆ ಸಮಾಜಕ್ಕೆ ಪ್ರೇರಣೆ ಸಿಗುವಂತ ಕಾರ್ಯದಲ್ಲಿ ತೊಡಗುತ್ತಾರೆ ಈ ನಿಟ್ಟಿನಲ್ಲಿ ಭಜನಾ ಮಂದಿರದ ಕಾರ್ಯ ಶ್ಲಾಘನೀಯ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ತುಂಬೆ ಗ್ರಾ.ಪಂ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಕಲಾವಿದ ಸದಾಶಿವ ಡಿ ತುಂಬೆ, ಲೋಕೇಶ್ ಇಂಜಿನಿಯರಿಂಗ್ ನ ಮಾಲಕರಾದ ಲೋಕೇಶ್ ಬೋಳಾರ, ಬಜಾರ್ ಬೀಡಿ ಮಾಲಕರಾದ ಸುಧಾಕರ ಆಚಾರ್ಯ, ಜೆಸಿಐ ಬಂಟ್ವಾಳದ ನಿಕಟಪೂರ್ವ ಅಧ್ಯಕ್ಷರಾದ ರೋಶನ್ ರೈ ಪಚ್ಚಿನಡ್ಕ, ತಾಲೂಕು ಕುಲಾಲ ಸಂಘದ ಅಧ್ಯಕ್ಷರಾದ ನಾರಾಯಣ ಸಿ ಪೆರ್ನೆ, ದಿನಕರ ಬಂಜನ್ ಬರೆ, ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ವಿಶ್ವನಾಥ ಬಿ, ಗ್ರಾ ಪಂ ಸದಸ್ಯರಾದ ಗಣೇಶ್ ಸಾಲಿಯಾನ್,ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ,ಆಡಳಿತ ಸಮಿತಿ ಅಧ್ಯಕ್ಷರಾದ ಶಶಿಧರ್ ಬ್ರಹ್ಮರಕೊಟ್ಲು,ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ನವೀನ್ ಎಸ್ ಬಂಗೇರ ಪಲ್ಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದವರಿಂದ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here