ಬಂಟ್ವಾಳ: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಬಂಟ್ವಾಳ ತಾಲೂಕಿನಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ವತಿಯಿಂದ ಟಿ.ಎ.ಪಿ.ಸಿ.ಯಂ.ಯಸ್ ಬಂಟ್ವಾಳ ಇದರ ದಾಸ್ತಾನು ಮಳಿಗೆಯಲ್ಲಿ ದಿನಾಂಕ: 01-01-2023 ರಿಂದ 31-03-2023 ರ ಅವಧಿಯವರೆಗೆ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ.
ರೈತರು ಈ ಖರೀದಿ ಕೇಂದ್ರದಲ್ಲಿ ಕನಿಷ್ಟ ಬೆಂಬಲ ಬೆಲೆ- ಸಾಮಾನ್ಯ ಭತ್ತ ಕ್ವಿಂಟಾಲ್ ಗೆ 2,040ರೂ. ಹಾಗೂ ಎ –ಗ್ರೇಡ್ ಭತ್ತಕ್ಕೆ2,060ರೂ.ಗೆ ಮಾರಾಟ
ಮಾಡಬಹುದಾಗಿದೆ. ಹಾಗೆಯೇ ಸ್ಥಳೀಯವಾಗಿ ಬೆಳೆಯಲಾಗುವ ಭತ್ತದ ತಳಿಗಳಾದ ಕಜೆ, ಜಯ,ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂಒ4 ಪ್ರತಿ ಕ್ವಿಂಟಾಲ್ ಗೆ ನರೂ.500 ಹೆಚ್ಚುವರಿ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಗರಿಷ್ಟ 40 ಕ್ವಿಂಟಾಲ್ ವರೆಗೂ ಓರ್ವ
ರೈತರಿಂದ ಖರೀದಿ ಮಾಡಲಾಗುವುದು.
ಪುಟ್ಸ್ ತಂತ್ರಾಂಶದಲ್ಲಿ FID ನೋಂದಣಿ ಮಾಡಿಸಿಕೊಳ್ಳದೇ ಇರುವ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ FID ಮಾಡಿಸಿಕೊಂಡು ಭತ್ತ
ಖರೀದಿ ಕೇಂದ್ರದಲ್ಲಿ ಬೆಂಬಲ ಬೆಲೆಯಡಿ ಭತ್ತವನ್ನು ನೀಡಲು ಅವಕಾಶ ಒದಗಿಸಲಾಗಿದೆ. ಆಸಕ್ತರು ಬಂಟ್ವಾಳ ತಾಲೂಕು ಖರೀದಿ ಕೇಂದ್ರದ ನೋಡಲ್ ಅಧಿಕಾರಿ ಶ್ರೀ.ವಿಜಯ್,
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಮೊ.9380435485)
ಇವರನ್ನು ಸಂಪರ್ಕಿಸಬಹುದು.ಎಂದು ತಿಳಿಸಿದ್ದಾರೆ.