ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತ್ ಹಾಗೂ ವೀರಕಂಬ ಗ್ರಾಮ ಪಂಚಾಯತಿನ ಸಾರ್ವಜನಿಕ ಗ್ರಂಥಾಲಯ ಇದರ ಓದುವ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಗ್ರಾಮ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳ ಚಿಣ್ಣರ ಚಿತ್ತಾರ ಅಭಿಯಾನದ ಅಂಗವಾಗಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯ ವರೆಗಿನ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಪಂಚಾಯತ್ ಸಮುದಾಯ ಭವನದಲ್ಲಿ ಡಿ.13ರಂದು ಏರ್ಪಡಿಸಲಾಗಿತ್ತು.
ವೀರಕಂಬ ಗ್ರಾಮ ವ್ಯಾಪ್ತಿಯ ಮೂರು ಪ್ರಾಥಮಿಕ ಶಾಲೆಗಳಾದ ಮಜಿ, ಕೆಲಿಂಜ, ಹಾಗೂ ಬಾಯಿಲ ಶಾಲೆಯ 20 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್, ಪಂಚಾಯತ್ ಗ್ರಂಥಾಪಾಲಕಿ ಗೀತಾ ಜಗದೀಶ್,ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ,ಶಿಕ್ಷಕಿ ಚಿತ್ರ , ಕೆಲಿಂಜ ಶಾಲಾ ಶಿಕ್ಷಕಿಯರಾದ ಉಷಾ ಗಂಗಾಧರ್, ನಲಿನಾಕ್ಷಿ ಪ್ರಕಾಶ್ , ಬಾಯಿಲ ಶಾಲಾ ಶಿಕ್ಷಕಿ ವಾರಿಜಾಕ್ಷಿ , ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿಜೇತರಿಗೆ ಬಹುಮಾನಗಳನ್ನು ವೀರಕಂಬ ಗ್ರಾಮ ಪಂಚಾಯಿತಿನ ಮಕ್ಕಳ ಗ್ರಾಮ ಸಭೆಯಲ್ಲಿ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.