ಬಂಟ್ವಾಳ: ಶ್ರಿ ಕ್ಷೇತ್ರ ನಂದಾವರ, ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವು 2023ರ ಜನವರಿ ತಿಂಗಳ 29-01-2023 ರಿಂದ 3-2-2023ರ ವರೆಗೆ ನಡೆಯಲಿದೆ.ಇದರ ಪೂರ್ವಬಾವಿ ಅಂಗವಾಗಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ
ಆಮಂತ್ರಣ ಪತ್ರಿಕೆ ಯನ್ನು ಒಡಿಯೂರು ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಕ್ಷೇತ್ರ ನಂದಾವರದ ಜ್ಞಾನ ಮಂದಿರ ದಲ್ಲಿ ಬಿಡುಗಡೆಗೊಳಿಸಿದರು.
ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಒಡಿಯೂರು ಸ್ವಾಮೀಜಿಯವರು ಮಾತನಾಡಿ ದೇವರ ಅನುಗ್ರಹ ಮತ್ತು ಸಜ್ಜನರ ಪ್ರಯತ್ನ ದಿಂದ ಬ್ರಹ್ಮ ಕಲಶ ಉತ್ಸವ ಸಾಂಗವಾಗಿ ನಡೆಯಲಿ, ಜೊತೆಗೆ ಯುವಶಕ್ತಿಯನ್ನು ಬಳಸಿಕೊಂಡು ಊರವರ ಸಹಕಾರದೊಂದಿಗೆ ಬ್ರಹ್ಮ ಕಲಶ ಉತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ವಹಿಸಿ ಅವರು ಮಾತನಾಡುತ್ತಾ, ಈ ಬಾರಿ ಅವಿಭಜಿತ ದಕ್ಷಿಣ ಜಿಲ್ಲೆಯಲ್ಲಿ 60ಕ್ಕಿಂತ ಹೆಚ್ಚಿನ ಬ್ರಹ್ಮಕಲಶ ನಡೆಯಲಿದೆ. ಶಾಸಕನ ನೆಲೆಯಲ್ಲಿ ತನ್ನಿಂದ ಆಗುವ ಎಲ್ಲ ಸಹಕಾರ ವನ್ನು ನೀಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕರು ಗಳಾದ ಎ. ರುಕ್ಕಯ್ಯ ಪೂಜಾರಿ,
ಸತೀಶ್ ಶೆಟ್ಟಿ, ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದ. ಕ, ಸಂತೋಷ್ ಶೆಟ್ಟಿ ದಲಂದಿಲ,ಕೆ. ವಿಶ್ವನಾಥ ಆಳ್ವ ಕಾಂತಾಡಿಗುತ್ತು,ದೇವಪ್ಪ ಪೂಜಾರಿ,ಬಾಳಿಕೆ, ಧೀರೇಶ್ ರಾವ್,ಸುಬ್ರಮಣ್ಯ ಭಟ್,ಸಜೀಪ ವೇದಮೂರ್ತಿ ಸೂರ್ಯ ನಾರಾಯಣ ಭಟ್, ಸಂತೋಷ್ ಶೆಟ್ಟಿ ಬಗಂಬಿಲ,ಉಪಸ್ಥಿತರಿದ್ದರು.
ಸಭೆಯಲ್ಲಿ ಶಶಿರಾಜ ರಾವ್ ನೂಯಿ,ಅಧ್ಯಕ್ಷರು ಅಭಿವೃದ್ಧಿ ಸಮಿತಿ,ಶ್ರೀಮತಿ ಜಯಮ್ಮ,ಕಾರ್ಯನಿರ್ವಾಹಣಾಧಿಕಾರಿ,ಧಾರ್ಮಿಕ ದತ್ತಿ ಇಲಾಖೆ, ಅರವಿಂದ ಭಟ್ ಪದ್ಯಾಣ,
ವೇದಮೂರ್ತಿ ಮಹೇಶ ಭಟ್ಟ,ಪ್ರಧಾನ ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಬ್ರಹ್ಮಕಲಶ ಸಮಿತಿ ಸದಸ್ಯರು ಮತ್ತು ಮಾಗಣೆಯ ಸಮಸ್ತರು ಉಪಸ್ಥಿತರಿದ್ದರು.