ಸುಳ್ಳು ಪ್ರಕರಣ ದಾಖಲಿಸಿ ಯುವ ವಕೀಲರನ್ನು ಬಂಧಿಸಿದ ಪೂಂಜಲಕಟ್ಟೆ  ಪೋಲಿಸರ ಅಮಾನತಿಗೆ ಆಗ್ರಹಿಸಿ ಯುವ ವಕೀಲರಿಂದ  ಪ್ರತಿಭಟನೆ

0

ಬಂಟ್ವಾಳ:  ಯುವ ವಕೀಲ ಕುಲ್ ದೀಪ್ ಶೆಟ್ಟಿಯವರನ್ನು ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ನಡೆಸಿದ ಪುಂಜಾಲ ಕಟ್ಟೆ ಪೊಲೀಸರ ಅಮಾನತಿಗೆ ಆಗ್ರಹಿಸಿ ಇಂದು ಬಂಟ್ವಾಳ  ನ್ಯಾಯಾಲಯದ  ಮುಂಭಾಗ  ಯುವ ವಕೀಲರ ವೇದಿಕೆ ಬಂಟ್ವಾಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ  ಹಿರಿಯ ವಕೀಲರಾದ ಸುರೇಶ್ ಶೆಟ್ಟಿ  ಮಾತನಾಡಿ ಪೋಲಿಸರ ಈ ಕೃತ್ಯವು ಖಂಡನೀಯ ವಾಗಿದ್ದು ಇದು ಇಡೀ ವಕೀಲ ಸಮುದಾಯವನ್ನೇ ಅವಮಾನಿಸುವ ಕ್ರಮ ವಾಗಿದೆ.ಇದು ಸಂವಿದಾನ ವಿರೋಧಿ ಕೃತ್ಯವಾಗಿದ್ದು ಪೋಲೀಸರ ಇಂತಹ ಕೃತ್ಯದ ವಿರುದ್ಧ ಇಡೀ ವಕೀಲ ಸಮುದಾಯ ಒಗ್ಗಟ್ಟಾಗಿದ್ದು ಕೂಡಲೇ ಹಲ್ಲೆ ಸಡೆಸಿದ ಪೋಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ವಕೀಲರ ಮೇಲೆಯೇ ಇಂತಹ ದೌರ್ಜನ್ಯ ನಡೆದರೆ ಸಾಮಾನ್ಯ ಜನರ ಪಾಡೇನು ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿರಿಯ ವಕೀಲರಾದ ಕೆ.ವಿ.ಭಟ್ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಎ.ಕೆ.ರಾವ್, ಸುರೇಶ್ ಪೂಜಾರಿ,ಪ್ರಕಾಶ್ ನಾರಾಯಣ ಜೆಡ್ಡು, ಪದ್ಮನಾಭ ಅಳಿಕೆ,ಹಾತಿಮ್ ಅಹಮದ್, ಎ.ಮೋಹನ್, ಚಂದ್ರಶೇಖರ್ ರಾವ್ ಪುಂಚಮೆ, ವಿಶ್ವನಾಥ ಗೌಡ, ಮಹಮ್ಮದ್ ಕಬೀರ್.ಕೆಮ್ಮಾರ,  ಯುವ ವಕೀಲರಾದ  ಮಲಿಕ್ ಅನ್ಸಾರ್ ಕರಾಯ , ಮೋಹನ್ ಕುಮಾರ್ ಕಡೇಶ್ವಾಲ್ಯ, ಅಬ್ದುಲ್ ಜಲೀಲ್ , ತುಳಸೀದಾಸ್.ವಿಟ್ಲ,ಎ.ಪಿ.ಮೊಂತೆರೋ , ಪ್ರಶಾಂತ್.ಕೆ, ನಿತಿನ್,   ಪ್ರದೀಫ್ .ಎನ್.ಕೆ,ಸೆಕೀನಾ, ಮಾಧುರಿ,  ನಿರ್ಮಲ,ಶುಭ, ಸುಷ್ಮಾ, ಕಾವ್ಯಶ್ರೀ,ದೀಪಕ್,  ಮಹಮ್ಮದ್ ಗಝಾಲಿ,  ಮಹಮ್ಮದ್ ಅಶ್ರಪ್, ಮಹಮ್ಮದ್ ಮುಂಝಿರ್ ,  ಶ್ರೀ ಕೃಷ್ಣ, ಲಕ್ಮೀನಾರಾಯಣ ಸಿದ್ದಕಟ್ಟೆ,ಹಾಗೂ ಹಲವಾರು ಯುವ ವಕೀಲರು ಭಾಗವಹಿಸಿದ್ದರು.ಯುವ ವಕೀಲರ ನಾಯಕರಾದ ವೀರೇಂದ್ರ ಎಂ ಸಿದ್ದಕಟ್ಟೆ ಪ್ರಾಸ್ತಾವಿಕ ವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here