ಬಂಟ್ವಾಳ : ಕೃಷಿ ಇಲಾಖೆ, ಆತ್ಮ ಯೋಜನೆ ಅಡಿಯಲ್ಲಿ ಕಿಸಾನ್ ಗೋಷ್ಠಿ ಕಾರ್ಯಕ್ರಮ ಬಿ.ಮೂಡ ಗ್ರಾಮದ ಬಿ.ಸಿ.ರೋಡ್ ಮಯ್ಯರ ಬೈಲು ಬಾಳೆಹಿತ್ಲು ಎಂಬಲ್ಲಿ ಡಿ. 6 ರಂದು ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಭತ್ತದ ಕೃಷಿ ಯಂತ್ರ ನಾಟಿಗೆ ಚಾಲನೆ, ಅಡಿಕೆ ಕೃಷಿ ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗ ನಿರ್ವಹಣೆಯ ಬಗ್ಗೆ ಮಾಹಿತಿ ಶಿಬಿರ ನಡೆಯಲಿದೆ.
ಕೊಂಬರಬೈಲು ಕರುಣೇಂದ್ರ ಪೂಜಾರಿ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಚಾಲನೆ ನೀಡುವರು.
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ. ಆರ್. , ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಬೊಲ್ಪು ರೈತ ಉತ್ವಾದಕರ ಕಂಪೆನಿ ಅಧ್ಯಕ್ಷ ರಾಜಾ ಬಂಟ್ವಾಳ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪಿ. ಜಯಾನಂದ, ಪ್ರಗತಿ ಪರ ಕೃಷಿಕರಾದ ಪದ್ಮನಾಭ ಕೆಲ್ದೋಡಿಗುತ್ತು, ಕೃಷ್ಣರಾಜ ಜೈನ್ ಪಂಜಿಕಲ್ಲು, ವಾಸು ಮೂಲ್ಯ ಬಾಳೆಹಿತ್ಲು, ವೆಂಕಟರಾವ್ ಬಾಳೆಹಿತ್ಲು, ಪುರುಷೋತ್ತಮ ಬಾಳೆಹಿತ್ಲು, ನಾಗೇಶ್ ಕುಲಾಲ್ ಬಾಳೆಹಿತ್ಲು, ಸಂಪನ್ಮೂಲ ವ್ಯಕ್ತಿ ವಿಟ್ಲ ಸಿ.ಪಿ.ಸಿ.ಆರ್.ಐ ವಿಜ್ಞಾನಿ ನಾಗರಾಜ್, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೊರಗಪ್ಪ ಭಾಗವಹಿಸುವರೆಂದು ಕೃಷಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.