ಉಪ್ಪಿನಂಗಡಿ: ಬಿಳಿಯೂರು ಗ್ರಾಮದ ಕಳೆಂಜ ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಮುಂಬರುವ ಡಿಸೆಂಬರ್ 25 ರಿಂದ 30ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ನ. 14ರಂದು ಚಪ್ಪರ ಮುಹೂರ್ತವು ನೆರವೇರಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೆನ್ನಪ್ಪ ಗೌಡ ಚಪ್ಪರ ಮುಹೂರ್ತವನ್ನು ನೆರವೇರಿಸಿ ಮಾತನಾಡಿ ಭಕ್ತ ಜನತೆಯ ಒಗ್ಗಟ್ಟಿನಿಂದ ಭಗವಂತನ ಕೃಪೆ ಒಲಿದು ಸಂಕಲ್ಪಿತ ಬ್ರಹ್ಮಕಲಶೋತ್ಸವವು ನಿರ್ವಿಘ್ನವಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್‍ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯದರ್ಶಿ ಉಮಾನಾಥ ಶೆಟ್ಟಿ, ದೇವಳದ ಆಡಳಿತ ಮಂಡಳಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು, ಕಾರ್ಯದರ್ಶಿ ಗೋಪಾಲ ಶೆಟ್ಟಿ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅವಿನಾಶ್ ಜೈನ್, ಅಧ್ಯಕ ಶಂಭು ಭಟ್, ಕಾರ್ಯದರ್ಶಿ ರಮೇಶ್, ಮೋಹನ್ ಶೆಟ್ಟಿ ಎಂ., ಗೋಪಾಲ ಸಪಲ್ಯ, ನವೀನ್ ಕುಮಾರ್, ದಯಾನಂದ್, ಪುಷ್ಪರಾಜ್ ಶೆಟ್ಟಿ, ಸುದೀಪ್ ಕುಮಾರ್, ಕೇಶವ ಎಸ್., ಸದಾಶಿವ ಶೆಟ್ಟಿ, ಐತಪ್ಪ ಭಂಡಾರಿ, ಮಹೇಶ್ ಪಡಿವಾಳ್, ಶ್ರೀಧರ್ ಗೌಡ, ಕೇಶವ ಎಸ್., ಯೋಜನಾ ಮೇಲ್ವಿಚಾರಕಿ ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು. ದೇವಳದ ಅರ್ಚಕ ನಾರಾಯಣ ಭಟ್ ವೈದಿಕ ವಿಧಾನಗಳನ್ನು ನೆರವೇರಿಸಿದರು.
Home ಇತ್ತೀಚಿನ ಸುದ್ದಿಗಳು ಪೆರ್ನೆ: ಕಳೆಂಜ ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವ ಅಂಗವಾಗಿ ಚಪ್ಪರ ಮುಹೂರ್ತ