ಬಂಟ್ವಾಳ ನ. : ರಾಮಾಂಜನೇಯ ಗೆಳೆಯರ ಬಳಗ (ರಿ.) ಮೈರ ಉಳಿ ಗ್ರಾಮ ಕಕ್ಕೆಪದವು ಬಂಟ್ವಾಳ ತಾಲೂಕು ಇದರ ಆಶ್ರಯಲ್ಲಿ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ಕೊಡಂಬೆಟ್ಟು ಇವರ ಶುಭ ಆರ್ಶೀವಾದದೊಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರ ನೇತೃತ್ವ ಹಾಗೂ ಗೌರವಾಧ್ಯಕ್ಷತೆಯಲ್ಲಿ ದಶಮಾನೋತ್ಸವದ ಸಂಭ್ರಮಾಚರಣೆಯ ಸುಮೂಹೂರ್ತದಲ್ಲಿ ಸತ್ಯ ಧರ್ಮ ಜೋಡುಕೆರೆ ಕಂಬಳವು ನ. 26 ರಂದು ಕಕ್ಕೆಪದವಿನ ಮೈರ ಬರ್ಕೆಜಾಲುವಿನಲ್ಲಿ ಕುಸುಮಾಧರ ಉರ್ಕಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲೆಯ ಕಂಬಳ ಕ್ರೀಡಾಭಿಮಾನಿಗಳ ಪ್ರೋತ್ಸಾಹದೊಂದಿಗೆ ನಡೆಯಲಿರುವುದು. ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.