‌ಬಂಟ್ವಾಳ : ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ

0

ಬಂಟ್ವಾಳ: ಯಾಮೊಟೋ ಶೋಟೋಕಾನ್ ಕರಾಟೆ ಅಸೋಸಿಯೇಶನ್ ಮಂಗಳೂರು ಟ್ರಸ್ಟ್ (ರಿ.) ಮಂಗಳೂರು, ರೋಟರಿ ಕ್ಲಬ್  ಲೊರೆಟ್ಟೋ ಹಿಲ್ಸ್, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ, ರೋಟರಿ ಕ್ಲಬ್ ಬಿಸಿರೋಡು ಸಿ.ಟಿ., ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಮೊಡಂಕಾಪು ಇವರ ಆಶ್ರಯದಲ್ಲಿ ತಾಲೂಕಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ನ.12, ಮತ್ತು 13 ರಂದು ಎರಡು ದಿನಗಳ ಕಾಲ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಯನ್ನು ಮಂಗಳೂರು ಶಾಸಕ ಯು.ಟಿ.ಖಾದರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಅಯೋಜಕರು ಅವಕಾಶ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ , ಹಿರಿಯ ಕ್ರೀಡಾ ಪಟುಗಳಿಗೆ ಇದೊಂದು ಸ್ಪರ್ಧಾತ್ಮಕ ಕ್ರೀಡೆಯಾದರೆ, ಕಿರಿಯ ಕೀಡಾಪಟುಗಳಿಗೆ ಈ ಕ್ರೀಡಾ ಕೂಟ ಕಲಿಕೆಯ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಮಾಜಿ ಸಚಿವ ಬಿ.ರಮಾನಾಥ ರೈ, ಅವರು ಮಾತನಾಡಿ, ಆರೋಗ್ಯ ವಂತ ಸಮಾಜವನ್ನು ನಿರ್ಮಾಣ ನಿರ್ಮಾಣ ಮಾಡತಕ್ಕಂತಹ, ಆರೋಗ್ಯವಂತ ಶರೀರ ನಿರ್ಮಾಣ ಮಾಡಲು ಕ್ರೀಡೆ ಅಗತ್ಯ, ಜೊತೆಗೆ ಆತ್ಮರಕ್ಷಣೆಗೆ ಕರಾಟೆ ಬಹು ಅನಿವಾರ್ಯ ವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ದಲ್ಲಿ ಸಿದ್ದಕಟ್ಟೆ ಶ್ರೀ ಪೂಂಜ ದೇವಸ್ಥಾನದ ಅಸ್ರಣ್ಣರಾದ ಕೃಷ್ಣ ಪ್ರಸಾದ್ ಆಚಾರ್ಯ, ಫಾದರ್ ವಲೇರಿಯನ್ ಡಿ.ಸೋಜ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿ.ಸೋಜ, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಪುರಸಭಾ ಸದಸ್ಯ ಹರಿಪ್ರಸಾದ್, ಜನಜಾಗೃತಿ ವೇದಿಕೆ ಅಧ್ಯಕ್ಷ ರೊನಾಲ್ಡ್ ಡಿ.ಸೋಜ, ರೋಟರಿ ಕ್ಲಬ್ ಗೌರವಾಧ್ಯಕ್ಷ ರಾಘವೇಂದ್ರ ಭಟ್, ರೋ.ಸತೀಶ್, ರೊ.ವಿಜಯ ಪೆರ್ನಾಂಡಿಸ್, ಅಧ್ಯಕ್ಷ ಕ್ಯೋಷಿ ಶ್ಯಾಜು ಮುಲವಾನ ಕೋಶಾಧಿಕಾರಿ ರೆನ್ನಿ ಜೆರಾಲ್ಡ್ ಫರ್ನಾಂಡೀಸ್, ಜೊತೆ ಕಾರ್ಯದರ್ಶಿ ಸೆನ್ಸಯಿ ಅಶೋಕ್ ಆಚಾರ್ಯ ಮತ್ತು ರೋಟರಿ ಕ್ಲಬ್ ಪ್ರಮುಖರು, ಸದಸ್ಯರುಗಳು ಉಪಸ್ಥಿತರಿದ್ದರು.

ಈ ಸ್ಪರ್ಧಾ ಕೂಟದಲ್ಲಿ ರಾಜ್ಯದ ಸುಮಾರು 1500 ಕ್ಕೂ ಅಧಿಕ ಪರಿಣತಿ ಹೊಂದಿದ ಪ್ರಭಾವಿ ಕರಾಟೆಪಟುಗಳು ಭಾಗವಹಿಸಿದ್ದು, ಕಟ ಹಾಗೂ ಕುಮಿಟೆ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.

LEAVE A REPLY

Please enter your comment!
Please enter your name here