ಬಂಟ್ವಾಳ : ಸಮುದ್ರ ಮಥನದ ಮೂಲಕ ಉದ್ಭವಿಸಿದ ಕಾಮದೇನು ಇಡೀ ವಿಶ್ವದ ಒಳಿತಿಗಾಗಿ ದೇವರ ಅಪೂರ್ವ ಸೃಷ್ಟಿಯಾಗಿದೆ . ಗೋಮಾತೆ ಕಣ್ಣಿಗೆ ಕಾಣುವ ನಮ್ಮೆಲ್ಲರ ದೇವತೆಯಾಗಿದ್ದು, ಆಕೆಯನ್ನು ಪೂಜಿಸುವ ಮೂಲಕ ಕೃತಾರ್ಥರಾಗೋಣ ಎಂದು ಮಂಗಳೂರು ಕದ್ರಿ ಕದಳಿ ಯೋಗೇಶ್ವರ ಮಠದ ಶ್ರೀ ರಾಜಾ ನಿರ್ಮಲನಾಥ್ ಜೀ ಅವರು ಹೇಳಿದರು.
‘ರಾಧಾ ಸುರಭಿ ಗೋ ಮಂದಿರದ ಗೋ ನವರಾತ್ರಿ ಉತ್ಸವ’ದ ಪ್ರಯುಕ್ತ ಭಾನುವಾರ ಪುದು ಗ್ರಾಮದ ಗೋವಿನ ತೋಟ ರಾಧಸುರಭೀ ಗೋಶಾಲಾ ವಠಾರದಿಂದ ಆರಂಭಗೊಂಡ ‘ಗೋರಥ ಯಾತ್ರೆ’ ಮುನ್ನ ಗೋಪೂಜೆ ನೆರವೇರಿಸಿ ಅವರು ಅಶೀರ್ವಚನಗೈದರು.
ಮೂಡಬಿದ್ರೆಯ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ರಥಯಾತ್ರೆಗೆ ಚಾಲನೆ ನೀಡಿದರು
ಈಸಂದರ್ಭದಲ್ಲಿ ಆಧ್ಯಾತ್ಮ ಚಿಂತಕ ಶೋಭಾ ಮಯ್ಯ ,ಉದ್ಯಮಿ ಎಂ.ಪಿ ದಿನೇಶ್ , ನ್ಯಾಯವಾದಿ ಪಿ.ಶಿವಶಂಕರ ರಾವ್ , ರಾಷ್ಟ್ರೀಯ ಗೋಸೇವಾ ಸಂಸ್ಥಾನಂ ಟ್ರಸ್ಟ್ ಅಧ್ಯಕ್ಷ ಭಕ್ತಿ ಭೂಷಣ್ ಪ್ರಭುಜಿ , ಪುತ್ತೂರು ಜಿಲ್ಲಾ ಸಂಘ ಚಾಲಕ್ ಕೊಡ್ಮಣ್ ಕಾಂತಪ್ಪ ಶೆಟ್ಟಿ , ಗಂಗಾಧರ ಪೆರ್ಮಂಕಿ,ಫರಂಗಿಪೇಟೆ ವ್ಯ. ಸೇ. ಬ್ಯಾಂಕ್ ನ ಅಧ್ಯಕ್ಷ ಸುಬ್ರಮಣ್ಯ ರಾವ್ , ಉಪಾಧ್ಯಕ್ಷ ಪುಂಚಮೆ ಪದ್ಮನಾಭ ಶೆಟ್ಟಿ ,ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ,ಪುದು ಪಂಚಾಯತ್ ಸದಸ್ಯರುಗಳಾದ ಮನೋಜ್ ಆಚಾರ್ಯ ನಾಣ್ಯ , ಸಂತೋಷ್ ನೆತ್ತರಕೆರೆ , ವೀಣಾ ಪದ್ಮನಾಭ , ಜ್ಯೋತಿಷಿ ಅನಿಲ್ ಪಂಡಿತ್ ,ಭಾಸ್ಕರ ಚೌಟ,ರಾಮಚಂದ್ರ ಬಂಗೇರ,ಸತೀಶ್ ನಾಯ್ಗ , ಬಾಲಕೃಷ್ಣ ಶೆಟ್ಟಿ ದೇವಸ್ಥಾನ ಬೆಟ್ಟು, ದಿನೇಶ್ ಶೆಟ್ಟಿ ಕೊಟ್ಟಿಂಜ, ಪ್ರವೀಣ್ ಶೆಟ್ಟಿ ಸುಜೀರು, ನವೀನ ಕುಲಾಲ್ , ಪ್ರವೀಣ್ ಕಬೆಲ , ಎ.ಕೆ ಗಿರೀಶ್ ಶೆಟ್ಟಿ , ಸುಕೇಶ್ ಶೆಟ್ಟಿ ತೇವು , ಶಾಂತಾ ಡಿ.ಚೌಟ , ಸುನೀತಾ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು ,ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷರಾದ ತೇವು ತಾರಾನಾಥ ಕೊಟ್ಟಾರಿಯವರು ಕಾರ್ಯಕ್ರಮ ನಿರ್ವಹಿಸಿದರು.
ಗೋರಥ ಯಾತ್ರೆಯು 16ರಿಂದ ಜಿಲ್ಲೆಯಾದ್ಯಂತ ಸಂಚರಿಸಿ 26ಅಕ್ಟೋಬರ್ ನಂದು ಗೋ ನವರಾತ್ರಿ ಉತ್ಸವಕ್ಕೆ ಸೇರಿಕೊಳ್ಳಲಿದೆ.