ಬಂಟ್ವಾಳ:- ಬಂಟ್ವಾಳ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮದ ಪಂಚಾಯಿತಿಗಳ ಸಂಜೀವಿನಿ ಸ್ವಸಹಾಯ ಸಂಘಗಳ ಮಾಹಿತಿ ಶಿಬಿರವು ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅ 17 ನಡೆಯಿತು.ಈ ಸಂದರ್ಭದಲ್ಲಿ ಸುದ್ದಿ ಮಾಧ್ಯಮದ ಸಂಪಾದಕರಾದ ಡಾ.ಶಿವಾಂದ ಮಾತನಾಡಿ ಸ್ವಸಹಾಯ ಸಂಘಗಳ ಮುಕೆನ ವಿವಿಧ ಉತ್ಪನ್ನಗಳನ್ನು ತಯಾರಿಸಿ ಅದಕ್ಕೆ ಬೇಕಾಗಿರುವ ಮಾರ್ಕೆಟಿಂಗ್ ಹಾಗೂ ಪ್ರಚಾರದ ವ್ಯವಸ್ಥೆಯನ್ನು ಬಂಟ್ವಾಳ ಸುದ್ದಿ ಕೃಷಿ ಮಾಹಿತಿ ಕೇಂದ್ರದ ಮೂಲಕ ಮಾಡಲಾಗುವುದು ಎಂದು ವಿವರಿಸಿದರು.ಅಲ್ಲದೇ ಸಭೆಯಲ್ಲಿ ತಾಲೂಕು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ ಅವರು ಸ್ವಸಹಾಯ ಸಂಘಗಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಂಟ್ವಾಳ ಸುದ್ದಿ ಬಳಗದ ರಾಜ ಬಂಟ್ವಾಳ, ಚಂದ್ರಹಾಸ ನುರ್ತಾಡಿ, ಪುತ್ತೂರು ಕೃಷಿ ಮಾಹಿತಿ ಕೇಂದ್ರದ ಗಣೇಶ್ ಭಾಗವಹಿಸಿದ್ದರು.