ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತುಂಬೆ ವಲಯ ನರಿಕೊಂಬು ಕಾರ್ಯಕ್ಷೇತ್ರ ವ್ಯಾಪ್ತಿಯ ನರಿಕೊಂಬು ಗ್ರಾಮದ ಮಾಣಿಮಜಲ್ ಎಂಬಲ್ಲಿ ಡಿಜಿಟಲ್ ಸೇವಾ ಕೇಂದ್ರ ಕಾಮನ್ ಸರ್ವಿಸ್ ಸೆಂಟರ್ ಅನ್ನು ಪ್ರಾರಂಭಿಸಲಾಯಿತು.
ಸೇವಕೇಂದ್ರವನ್ನು ಉದ್ಘಾಟಿಸಿದ ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವು ರವರು ಮಾತನಾಡಿ ನರಿಕೊಂಬು ಗ್ರಾಮ ವ್ಯಾಪ್ತಿಯ ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಯೋಜನೆಯ ಸೇವಾ ಕೇಂದ್ರಗಳ ಜಿಲ್ಲಾ ನೋಡಲ್ ಅಧಿಕಾರಿ ನವೀನ್ ಸೇವಾಕೇಂದ್ರಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಕೊಡಿಮಜಲು, ಯೋಜನೆಯ ನರಿಕೊಂಬು ಏ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಫಲ್ಯ, ನರಿಕೊಂಬು ಬಿ ಒಕ್ಕೂಟದ ಅಧ್ಯಕ್ಷ ಜಯಂತ್, ಸೇವ ಕೇಂದ್ರದ ಕಟ್ಟಡ ಮಾಲೀಕರಾದ ಶೇಕರ್, ಪ್ರಗತಿಪರ ಕೃಷಿಕರಾದ ಪ್ರೇಮನಾಥ್ ಅಂತರ, ಸೇವಕೇಂದ್ರಗಳ ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿ ಪ್ರಸಾದ್, ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್, ತುಂಬೆ ಒಕ್ಕೂಟ ಅಧ್ಯಕ್ಷ ನವೀನ್, ನರಿಕೊಂಬು ಒಕ್ಕೂಟದ ನಿಕಟಪಪೂರ್ವ ಅಧ್ಯಕ್ಷ ಯೋಗೇಶ್, ಸೇವಾ ಪ್ರತಿನಿಧಿಗಳಾದ ಕುಸುಮಾವತಿ ಹಾಗೂ ಪ್ರತಿಭಾ, ಸೇವ ಕೇಂದ್ರದ ಸಿಬ್ಬಂದಿ ದೀಪಿಕಾ, ನರಿಕೊಂಬು ಎ ಮತ್ತು ಬಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.