ಬಂಟ್ವಾಳ : ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಣಿಹಳ್ಳ ಶಾಖೆಯನ್ನು ಸೆ.4ರಂದು ನಾವೂರು ಗ್ರಾಮದ ಮಣಿಹಳ್ಳದ ಶೇಷಾದ್ರಿ ಕಾಂಪ್ಲೆಕ್ಸ್ ನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿ ಗ್ರಾಮಾಂತರ ಪ್ರದೇಶದಲ್ಲಿ ಶಾಖೆ ತೆರೆಯುವ ಮೂಲಕ ಸ್ಥಳೀಯರಿಗೆ ಸೇವೆ ನೀಡುವ ಕ್ರಾಂತಿಕಾರಕ ಹೆಜ್ಜೆಯನ್ನು ಮೂರ್ತೆದಾರರ ಸೇವಾ ಸಹಕಾರಿ ಸಂಘ ಮಾಡಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸುವಾಗ ನಮ್ಮ ದೇಶದ ಆರ್ಥಿಕ ಪ್ರಗತಿ ಸಾಧನೆ 11ನೇ ಕ್ರಮಾಂಕದಲ್ಲಿತ್ತು. ಪ್ರಸ್ತುತ 4ನೇ ಸ್ಥಾನಕ್ಕೆ ಏರಿದೆ. ಇದು ಆತ್ಮ ನಿರ್ಭರ ಭಾರತದ ಕೊಡುಗೆ. ಸಹಕಾರಿಯು ಜನ ನೋಡಿಕೊಂಡು ಎಲ್ಲಾ ವರ್ಗದ ಜನರಿಗೆ ಆರ್ಥಿಕ ಸಾಲದ ಸಹಾಯ ನೀಡುವ ಮೂಲಕ ಜನಹಿತದ ಕೆಲಸ ಮಾಡುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಆಕಸ್ಮಿಕ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಶಾಸಕರು ಸಹಕಾರಿಯ ಸಹಾಯಧನ ವಿತರಣೆ ಮಾಡಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಜನರು ಸಹಕಾರಿಯ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಋಣಿಯಾಗಿದ್ದೇವೆ. ಮುಂದಿನ ಮೂರು ವರ್ಷದಲ್ಲಿ 25ಶಾಖೆ ತೆರೆಯುವ ಉದ್ದೇಶ ಹೊಂದಿದೆ.10ನೇ ಶಾಖೆಯನ್ನು ವಿಟ್ಲದಲ್ಲಿ ತೆರೆಯಲು ಯೋಜನೆ ಇದೆ ಎಂದರು. ಸಹಕಾರಿಯು ಕಳೆದ ಸಾಲಿನಲ್ಲಿ ರೂ.85 ಕೋಟಿ ವ್ಯವಹಾರ ಮಾಡಿ ಶೇ.25 ಡಿವಿಡೆಂಡ್ ನೀಡಿದೆ.ಮುಂದಿನ ವರ್ಷದಲ್ಲಿ 125 ಕೋಟಿ ರೂ. ವ್ಯವಹಾರ ಗುರಿ ಹೊಂದಿದೆ. ನಮ್ಮ ಸಿಬಂದಿಗಳ ಸೇವೆ ಸಂಸ್ಥೆಯ ಯಶಸ್ಸಿಗೆ ಕಾರಣ ವಾಗಿದೆ. ಮಹಿಳೆಯರಿಗೆ 25 ಸಾವಿರ ತ್ವರಿತ ಸಾಲ, ಸ್ವಸಾಯ ಗುಂಪು ಸಾಲ ನೀಡುವುದಲ್ಲದೆ ಇತರ ಸಾಲವನ್ನು ನೀಡುವುದಾಗಿ ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಸಹಕಾರಿಗೆ ಉಜ್ವಲ ಭವಿಷ್ಯ ಇದೆ. ಇಂದಿರಾ ಗಾಂಧಿ ಬ್ಯಾಂಕಿಂಗ್ ರಾಷ್ಟ್ರೀಕರಣ ಮಾಡುವ ದಿಟ್ಟ ಹೆಜ್ಜೆ ಇಡುವ ಮೂಲಕ ಸಾಮಾಜಿಕ ಪ್ರಗತಿಗೆ ಕಾರಣರಾಗಿದ್ದರು ಎಂದು ವಿವರಿಸಿದರು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಆದರ್ಶದಂತೆ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಜನ ಸೇವೆ ಮಾಡುತ್ತಿದೆ ಎಂದರು. ಜಗತ್ತಿನ ಇತಿಹಾಸ ಬದಲಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಉನ್ನತ ಸಾಧನೆ ಮಾಡಿದೆ. ಮನುಷ್ಯ ತನ್ನ ಇಚ್ಚಾಶಕ್ತಿಯಿಂದ ಉನ್ನತ ಸ್ಥಾನಕ್ಕೆ ಎರಬಹುದು ಎಂಬುದಕ್ಕೆ ಸಂಜೀವ ಪೂಜಾರಿ ಉಧಾಹರಣೆ ಎಂದರು.
ಮುಖ್ಯ ಅತಿಥಿಗಳಾಗಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕುಲಾಲ್ ಠೇವಣಿ ಪತ್ರ ಮತ್ತು ಪಾಸ್ ಬುಕ್ ಬಿಡುಗಡೆ ಮಾಡಿ ಹಿತವಚನ ನೀಡಿದರು. ಕಕ್ಕೆಪದವು ಬ್ರಹ್ಮಬೈದರ್ಕಳ ಗರಡಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಕಟ್ಟಡ ಮಾಲಕ ಜಿತೇಂದ್ರ ಸಾಲ್ಯಾಯನ್, ಸಹಕಾರಿ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನಪಾಲು, ನಿರ್ದೇಶಕರಾದ ವಿಠ್ಠಲ ಬೆಲ್ಚಾಡ ಅಶೋಕ್ ಪೂಜಾರಿ ಕೋಮಾಲಿ, ಕೆ. ಸುಜಾತ ಎಂ. ವಾಣಿ ವಸಂತ್, ಮುಖ್ಯ ಕಾಯನಿರ್ವಾಹಣಾಧಿಕಾರಿ ಮಮತಾ ಜಿ., ಶಾಖಾಧಿಕಾರಿ ಅಕ್ಷತಾ ಚಂದ್ರಶೇಖರ ಮತ್ತು ಸಿಬಂದಿಗಳು ಉಪಸ್ಥಿತರಿದ್ದರು. ಕಟ್ಟಡ ಮಾಲಕ ನಿರ್ದೇಶಕ ರಮೇಶ್ ಅನ್ನಪ್ಪಾಡಿ ಸ್ವಾಗತಿದರು. ನಿರ್ದೇಶಕ ಜಯಶಂಕರ್ ಕಾನ್ಸಾಲೆ ವಂದಿಸಿದರು.ಗಿರೀಶ್ ಪೆರ್ವ ಕಾರ್ಯಕ್ರಮ ನಿರ್ವಹಿಸಿದರು.