ಕೇರಳದಲ್ಲಿ ಟೊಮೆಟೋ ಜ್ವರ ಹೆಚ್ಚಳ ; ಗಡಿ ಪ್ರದೇಶದಲ್ಲಿ ತಪಾಸಣೆ ತೀವ್ರ

0

ಬೆಂಗಳೂರು:ಕೇರಳದಲ್ಲಿ ಟೊಮೆಟೋ ಜ್ವರ ಪ್ರಕರಣಗಳು ವರದಿಯಾಗುತ್ತಿದ್ದು ರಾಜ್ಯದಲ್ಲೂ ಹೈಅಲರ್ಟ್ ಘೋಷಿಸಲಾಗಿದೆ.ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ನಾಗರಿಕರು ಕೂಡ ಜಾಗರೂಕರಾಗಿರಬೇಕು ಮತ್ತು ಯಾವುದೇ ರೀತಿಯ ಚರ್ಮದ ದದ್ದುಗಳು ಕಂಡುಬಂದರೆ ತಕ್ಷಣವೇ ವರದಿ ಮಾಡುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ ಯಾವುದೇ ಪ್ರಕರಣಗಳು ವರದಿಯಾಗದ ಕಾರಣ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದಾಗ್ಯೂ ತೀವ್ರ ನಿಗಾ ವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ಮತ್ತು ಕೇರಳದ ಗಡಿ ಜಿಲ್ಲೆಗಳಲ್ಲಿ ಈ ಹಿಂದೆ ಅನುಸರಿಸುತ್ತಿದ್ದ ವಿಧಾನಗಳನ್ನು ಅನುಸರಿಸಲಾಗುತ್ತಿದೆ.ಗಡಿಗಳಲ್ಲಿ ನಿಯಮಿತ ತಪಾಸಣೆಯನ್ನೂ ತೀವ್ರಗೊಳಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಕಣ್ಗಾವಲು ಘಟಕಗಳ ಉಪನಿರ್ದೇಶಕಿ ಡಾ.ಪದ್ಮಾ ಅವರು ಹೇಳಿದ್ದಾರೆ. ದೇಹದಲ್ಲಿ ಕೆಂಪು ಬಣ್ಣದ ನೋವಿರುವ ಗುಳ್ಳೆಗಳು ಕೈ, ಕಾಲು ಮತ್ತು ಬಾಯಿ ನೋವು ಟೊಮೊಟೊ ಜ್ವರದ ಲಕ್ಷಣಗಳಾಗಿದ್ದು, ಇದು ಹೆಚ್ಚು ಸಾಂಕ್ರಾಮಿಕವಾಗಿದೆ.ಹಾಗಾಗಿ ಶಾಲೆಗಳಲ್ಲಿ ಹೆಚ್ಚಿನ ನಿಗಾವಹಿಸುವುದು ಮತ್ತು ಮೊದಲೇ ಪತ್ತೆ ಮಾಡುವುದು ಅತ್ಯಗತ್ಯ ಎಂದು ವೈಟ್‌ಫೀಲ್ಡ್‌ನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ.ಪ್ರವೀಣ್ ಭಾರದ್ವಾಜ್ ಅವರು ತಿಳಿಸಿದ್ದಾರೆ.

ಗಮನಿಸಬೇಕಾದ ಲಕ್ಷಣಗಳು :

ಜ್ವರ,ಕೈ,ಅಂಗೈ, ಮೊಣಕೈ, ಮೊಣಕಾಲುಗಳ ಮೇಲೆ ದದ್ದು,ಮೊಣಕೈ, ಅಂಗೈ, ಬಾಯಿಯಲ್ಲಿ ಗುಳ್ಳೆಗಳು, ಹಸಿದಿದ್ದರೂ ತಿನ್ನಲು ತೊಂದರೆ, ದೇಹದಲ್ಲಿ ಎದ್ದುಕಾಣುವ ಕೆಂಪು ಗುಳ್ಳೆಗಳು.

LEAVE A REPLY

Please enter your comment!
Please enter your name here