ಇನ್ನೂ ಮುಗಿಯದ ಹಿಜಾಬ್‌ ವಿವಾದ ; ಟಿಸಿಯನ್ನೇ ಹಿಂಪಡೆದ ವಿದ್ಯಾರ್ಥಿನಿಯರು

0

ಮಂಗಳೂರು : ಹಿಜಾಬ್ ವಿವಾದ ತಣ್ಣಗಾಗಿದ್ದರೂ ಅದರ ಪರಿಣಾಮಗಳು ಮಾತ್ರ ನಿಂತಿಲ್ಲ. ಹಿಜಾಬ್ ಧರಿಸಿ ತರಗತಿಗಳಿಗೆ ಬರಲು ಅವಕಾಶ ನೀಡದ ಹಿನ್ನೆಲೆಯಲ್ಲಿ 145 ಕಾಲೇಜು ವಿದ್ಯಾರ್ಥಿನಿಯರು ತಮ್ಮ ಟಿಸಿಯನ್ನೇ ಹಿಂಪಡೆದ ಘಟನೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಯಾವುದೇ ಧಾರ್ಮಿಕ ಚಿಹ್ನೆ ಧರಿಸಿ ಶಾಲಾ-ಕಾಲೇಜಿನ ತರಗತಿಗಳಿಗೆ ಹೋಗುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ಕೂಡ ಹಿಜಾಬ್ ಧರಿಸಿ ಬರಲು ಅವಕಾಶ ನೀಡುವಂತೆ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಹಿಜಾಬ್ ಧರಿಸಿ ಬರಲು ಅವಕಾಶವಿಲ್ಲ ಎಂದು ಖಡಕ್ ಆಗಿ ಸೂಚಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಎಸ್.ಯಡಪಡಿತ್ತಾಯ, ವಿದ್ಯಾರ್ಥಿಯರಿಗೆ ಟಿಸಿ ಪಡೆದುಕೊಳ್ಳುವಂತೆ ಹೇಳಿದ್ದರು.

LEAVE A REPLY

Please enter your comment!
Please enter your name here