MITE FEST 2K26ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದ ವಿದ್ಯಾರ್ಥಿಗಳ ಸಾಧನೆ

0

ಬಂಟ್ವಾಳ: ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ MITE FEST 2K26 ಅಂತರ್ ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದ ವಿದ್ಯಾರ್ಥಿಗಳು ಒಂಬತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ರೀಲ್ಸ್ ನಿರ್ಮಾಣದಲ್ಲಿ ಪ್ರಥಮ, ಚಿತ್ರಕಲೆ ಮತ್ತು ಮೂಕಾಭಿನಯದಲ್ಲಿ ದ್ವಿತೀಯ ಸ್ಥಾನ, ಟ್ರೆಷರ್ ಹಂಟ್‌ನಲ್ಲಿ ಸಮಾಧಾನಕರ ಬಹುಮಾನ ಹಾಗೂ ಅತ್ಯುತ್ತಮ ಭಾಗವಹಿಸುವಿಕೆ ತಂಡ ಪ್ರಶಸ್ತಿಯನ್ನು ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here