ಬೊಂಡಾಲ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ

0

ಬಂಟ್ವಾಳ: “ಹುಟ್ಟಿದವನಿಗೆ ಸಾವು ನಿಶ್ಚಿತ, ಆಯುಷ್ಯ ಮುಗಿದವನಿಗೆ ಎಲ್ಲಿದ್ದರೂ ಸಾವು ಬರುತ್ತದೆ. ಸೇನೆಗೆ ಸೇರಿದವರು ಸಾಯುತ್ತಾರೆ ಎನ್ನುವುದು ಕೇವಲ ಒಂದು ಮಿಥ್ಯಾಪವಾದ. ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ಸಾರ್ಥಕ ಭಾವಕ್ಕಾಗಿ ಯುವಕರು ಸೇನೆಗೆ ಸೇರಬೇಕು” ಎಂದು ನಿವೃತ್ತ ಯೋಧ ಹವಾಲ್ದಾರ್ ಗಣೇಶ್ ಕಾಮತ್ ಅವರು ಹೇಳಿದರು.

ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ “ಯೋಧ ನಮನ” ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ ಹಾಗೂ ಶಾಲಾ ಸಿಬ್ಬಂದಿ ಹರೀಶ್ ದೇವಂದಬೆಟ್ಟು ಅವರು ಗಡಿಯಲ್ಲಿ ನಡೆಯುವ ಸೈನಿಕ ಕಾರ್ಯಾಚರಣೆಗಳ ರೋಚಕ ವಿವರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕ ಕಮಲಾಕ್ಷ ಕಲ್ಲಡ್ಕ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಾಲೆಯ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅಳುಪ ಸಮಾಜ ವಿಜ್ಞಾನ ಸಂಘದ ಕಾರ್ಯದರ್ಶಿ ಗಣ್ಯ ಎಸ್. ಪೂಜಾರಿ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾನೂನು ಸಂಘದ ಅಧ್ಯಕ್ಷೆ ಧೃತಿ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಕಾನೂನು ಸಂಘದ ಕಾರ್ಯದರ್ಶಿ ಆದಿತ್ಯ ಧನ್ಯವಾದ ಸಮರ್ಪಿಸಿದರು. ಸಮಾಜ ವಿಜ್ಞಾನ ಸಂಘದ ಅಧ್ಯಕ್ಷರಾದ ಫಾತಿಮತ್ ಸಾಬಿರಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here