ಜೋಡುಮಾರ್ಗ ನೇತ್ರಾವತಿ ಜೇಸಿಯ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಪೈ ನಿಧನ

0

ಬಂಟ್ವಾಳ: ಜೋಡುಮಾರ್ಗ ನೇತ್ರಾವತಿ ಜೇಸಿಯ ಮಾಜಿ ಅಧ್ಯಕ್ಷ, ಬಿ.ಸಿ.ರೋಡಿನ ಜಿ.ಎಸ್.ಬಿ.ಸಮಾಜ ಸೇವಾ ಸಮಿತಿಯ ಮಾಜಿ ಕಾರ್ಯದರ್ಶಿ, ಕಲಾವಿದ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಎಂ.ಸುಬ್ರಹ್ಮಣ್ಯ ಪೈ (43) ಅಲ್ಪಕಾಲದ ಅಸೌಖ್ಯದ ಬಳಿಕ ಬುಧವಾರ (ಸೆ.29) ರಾತ್ರಿ ನಿಧನ ಹೊಂದಿದ್ದಾರೆ.

ತುಳು, ಕೊಂಕಣಿ ಭಾಷಾ ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಉತ್ತಮ ನಿರೂಪಕರೂ ಆಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳು ಜು.30ರಂದು ಸಂಜೆ ಗಂಟೆ 5.30ಕ್ಕೆ ಬಿ.ಸಿ. ರೋಡ್ ನಲ್ಲಿರುವ ಸ್ವಗೃಹದಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

ಮೃತರು ಶಿಕ್ಷಕಿಯಾಗಿರುವ ಪತ್ನಿ ಮತ್ತು ಬಂಧುವರ್ಗ ಹಾಗೂ ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here