ಗೋಳ್ತಮಜಲು ಘಟ ಸಮಿತಿಯ ವತಿಯಿಂದ ಕಲ್ಲಡ್ಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ : ಶ್ರೀ ಧೂಮಾವತಿ ಬಂಟ ದೈವಸ್ಥಾನದಲ್ಲಿ ಶ್ರಮದಾನ

0

ಬಂಟ್ವಾಳ: ಒಡಿಯೂರು ಶ್ರೀಗಳ ಜನ್ಮದಿನದ ಅಂಗವಾಗಿ ಕಲ್ಲಡ್ಕ ಗೋಳ್ತಮಜಲು ಘಟಸಮಿತಿಯ ವತಿಯಿಂದ ಕಲ್ಲಡ್ಕದ ದ.ಕ.ಜಿ.ಪ. ಮಾದರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬಳಿಕ ಕಲ್ಲಡ್ಕ ಶ್ರೀ ಧೂಮಾವತಿ ಬಂಟ ದೈವಸ್ಥಾನದಲ್ಲಿ ಶ್ರಮದಾನ ನಡೆಯಿತು.


ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮತ್ತು ಝಾನ್ಸಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮೀನಾಕ್ಷಿ ಆರ್.ಪೂಜಾರಿ ದೀಪ ಪ್ರಜ್ವಲಿಸಿದರು.

ಗೋಳ್ತಮಜಲು ಘಟಸಮಿತಿಯ ಅಧ್ಯಕ್ಷೆ ಉಷಾ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್, ಗ್ರಾಮ ವಿಕಾಸ ಯೋಜನೆಯ ಬಂಟ್ವಾಳ ತಾಲೂಕು ಉತ್ತರ ವಲಯದ ಮೇಲ್ವಿಚಾರಕಿ ಜಯಲಕ್ಷ್ಮಿ ಪ್ರಭು ಹಾಗೂ ಕಲ್ಲಡ್ಕ ವಲಯದ ಗ್ರಾಮ ಸಂಯೋಜಕಿ ಸರಸ್ವತಿ ಶೆಟ್ಟಿ ಬಾಳ್ತಿಲ ಮತ್ತು ಗೊಳ್ತಮಜಲು ಗ್ರಾಮದ ಸೇವಾ ದೀಕ್ಷಿತರಾದ ಶ್ಯಾಮಲಾ ಹಾಗೂ ಉಷಾ ಉಪಸ್ಥಿತರಿದ್ದರು.
ಗ್ರಾಮ ಸಂಯೋಜಕಿ ಸರಸ್ವತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಖಲತ, ಸೇವಾದಿಕ್ಷಿತೆ ಶ್ಯಾಮಲಾ ನಿರೂಪಿಸಿದರು

LEAVE A REPLY

Please enter your comment!
Please enter your name here