ಮಾಣಿ ಲಯನ್ಸ್ ಕ್ಲಬ್‌ನ 2026-27ನೇ ಸಾಲಿನ ಪದಗ್ರಹಣ ಸಮಾರಂಭ

0


ಮಾಣಿ: ಮಾಣಿ ಲಯನ್ಸ್ ಕ್ಲಬ್‌ನ ಪದಗ್ರಹಣ ಸಮಾರಂಭವು ಜು.20ರಂದು ಮಾಣಿ ಪದ್ಮಮಾಲ್‌ ಹಾಲ್‌ನಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಜನಾರ್ದನ ಪೆರಾಜೆ ವಹಿಸಿದ್ದರು. ಬಳಿಕ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ವಿನ್ಸೆಂಟ್ ಲಸ್ರಾದೊ ಎಂ.ಜೆ.ಎಫ್., ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಖಜಾಂಜಿಯಾಗಿ ರೊನಾಲ್ಡ್ ಮೋನಿಸ್, ಪದಗ್ರಹಣ ಅಧಿಕಾರಿಯಾಗಿ ವೆಂಕಟೇಶ್ ಹೆಬ್ಬಾರ್ ದಂಪತಿಗಳು, ಮುಖ್ಯ ಅತಿಥಿಯಾಗಿ ವಂ. ಫಾದರ್ ಪ್ಯಾಟ್ರಿಕ್ ಸಿಕ್ವೇರಾ, ಪ್ರಾಂತೀಯ ಅಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ, ವಲಯ ಅಧ್ಯಕ್ಷರಾದ ಅಜಿತ್ ಮುಡಿಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಪದಾಧಿಕಾರಿಗಳು, ಪ್ರಾಂತೀಯ ಕ್ಲಬ್‌ಗಳ ಅಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದರು. ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ವೆಂಕಟೇಶ್ ಹೆಬ್ಬಾರ್ ತತ್ವ-ನೀತಿಗಳನ್ನು ಬೋಧಿಸಿದರು. ಸಭೆಯ ಮುಖ್ಯ ಅತಿಥಿಗಳು ಕ್ಲಬ್‌ನ ಸೇವೆ ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಶೀರ್ವಚನಗೈದರು. ಪಿ.ಎಂ.ಸಿ.ಸಿ. ವಸಂತ್ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಅನಿಲ್ ಕುಮಾರ್ ಧನ್ಯವಾದಗೈದರು. ಲಯನ್ ಗಂಗಾಧರ ಆಳ್ವಾ ಹಾಗೂ ಲಯನ್ ಉಮೇಶ್ ಪಿ. ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಗೊಂಡಿತು.

LEAVE A REPLY

Please enter your comment!
Please enter your name here