ಕಾಳಜಿ ಕೇಂದ್ರಕ್ಕೆ ನಿರಾಶ್ರಿತರ ಸ್ಥಳಾಂತರ
ಸುಳ್ಯ : ಭಾರೀ ಮೇಘಸ್ಪೋಟಕ್ಕೆ ಸುಳ್ಯ ಕಲ್ಮಕಾರಿನ ಪೇಟೆಯಲ್ಲಿರುವ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿ ನೀರು ಪಾಲಾಗಿದೆ. ಆ ಭಾಗದ ಜನಗಳ ಸಂಪರ್ಕ ಕಡಿತಗೊಂಡಿದೆ. ಭಾಗದಲ್ಲಿ 150 ಕ್ಕೂ ಅಧಿಕ ಮನೆಗಳಿದ್ದು ಶಾಲೆಗೆ ಹೋಗುವ ಮಕ್ಕಳು, ವೃದ್ದರು, ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲ್ಮಕಾರು ಗ್ರಾಮ ಗುಳಿಕ್ಕಾನದ 6 ಮನೆಯ 21 ಜನರನ್ನು ಕಾಳಜಿ ಕೇಂದ್ರಕ್ಕೆ ಆ.7ರಂದು ಸ್ಥಳಾಂತರಿಸಲಾಗಿದೆ. 2018 ರಲ್ಲಿ ಕಾಡು ಕುಸಿತ, ಭೂಮಿ ಒಡೆದು ಇಲ್ಲಿನ ಸ್ಥಳ ಅಪಾಯಕಾರಿ ಎಂದು ಗುರುತಿಸಲಾಗಿತ್ತು. ಪ್ರತಿ ವರ್ಷ ಮಳೆಗಾಲದ ಸಂದರ್ಭ ಇವರನ್ನು ಸ್ಥಳಾಂತರಿಸುವುದು ವಾಡಿಕೆಯಾಗಿ ಹೋಗಿದ್ದು, ಈ ವರ್ಷ ಮತ್ತೆ ಸ್ಥಳೀಯಾಡಳಿತ ಕಲ್ಮಕಾರು ಶಾಲಾ ಬಳಿ ಸ್ಥಳಾಂತರಿಸಿ ತಾತ್ಕಾಲಿಕ ಕಾಳಜಿ ಕೇಂದ್ರ ನಿರ್ಮಿಸಿರುವುದಾಗಿ ತಿಳಿದು ಬಂದಿದೆ.