ಮೆಲ್ಕಾರ್: ಗ್ಯಾಸ್ ಪಂಪ್ ನಲ್ಲಿ ದಾಂಧಲೆ : ಆರೋಪಿ ಬಂಧನ

0

ಬಂಟ್ವಾಳ: ಮೆಲ್ಕಾರ್ ನ ಗ್ಯಾಸ್ ಪಂಪ್ ನೊಳಗೆ ದಾಂಧಲೆ ನಡೆಸಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪದಡಿ ಆಟೋ ರಿಕ್ಷಾ ಚಾಲಕ ಸಜೀಪಮೂಡ ನಿವಾಸಿ ಆಫ್ರೀಝ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.


ಕುನಲ್ ಭುಹ್ನಿಯಾ ಎಂಬವರು ಬಂಟ್ವಾಳ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಎಂಬಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಶುಕ್ರವಾರ ಸಜಿಪಮೂಡ ನಿವಾಸಿ ಅಫ್ರೀಝ್ ಎಂಬಾತನು ರಿಕ್ಷಾ ಚಲಾಯಿಸಿಕೊಂಡು ಬಂದು, ಗ್ಯಾಸ್ ಪಂಪ್ ಏಜೆನ್ಸಿಯ ಒಳಗೆ ಪ್ರವೇಶಿಸಿ ಕಛೇರಿ ಸಿಬ್ಬಂದಿಯ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ನಂತರ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳಿಗೆ ಹಾನಿ ಮಾಡಿದ್ದು ಒಟ್ಟು 48 ಸಾವಿರಗಳಷ್ಟು ನಷ್ಟ ಉಂಟು ಮಾಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರಿನ ಯಾವುದೇ ಸುದ್ದಿ, ಮಾಹಿತಿಗಳಿದ್ದಲ್ಲಿ ಸಂಪರ್ಕಿಸಿ: +9190351 37252

LEAVE A REPLY

Please enter your comment!
Please enter your name here