ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ಸಡಿಲಿಕೆ; ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ನಿರ್ಬಂಧ

0

ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಅಹಿತಕರ ಘಟನೆ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ರಾತ್ರಿ ನಿರ್ಬಂಧವನ್ನು ಸಡಿಲಿಕೆ ಮಾಡಲಾಗಿದೆ. ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಆಸ್ಪತ್ರೆ, ಮೆಡಿಕಲ್, ತುರ್ತು ಸೇವೆ ಹೊರತು ಪಡಿಸಿ ಇತರೆಲ್ಲ ಅಂಗಡಿ, ಮುಂಗಟ್ಟು ವ್ಯವಹಾರಗಳನ್ನು ನಿರ್ಬಂಧಿಸಿ ನೀಡಲಾಗಿದ್ದ ಆದೇಶವನ್ನು ಸಡಿಲಗೊಳಿಸಲಾಗಿದ್ದು ಆ.5ರಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವ್ಯವಹಾರ ನಿರ್ಬಂಧ ಮಾಡಲಾಗಿದೆ.ಮುಂದಿನ ಮೂರು ದಿನಗಳ ಕಾಲ ಈ ನಿರ್ಬಂಧ ವಿಧಿಸಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿದ್ದಾರೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಈ ದಿನಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಅಂಗಡಿ ಮುಂಗಟ್ಟುಗಳು ಮುಚ್ಚಲಿವೆ. ಇಂದಿನಿ ದ ಮದ್ಯ ವ್ಯಾಪಾರ: ಆ.5ರಿಂದ ಮದ್ಯದಂಗಡಿಗಳನ್ನು ಸಂಜೆ 6 ಗಂಟೆಯವರೆಗೆ ತೆರೆದು ವ್ಯವಹಾರ ನಡೆಸಲು ಅವಕಾಶ ನೀಡಲಾಗಿದೆ.ಉಳಿದಂತೆ ಸೆಕ್ಷನ್ 144ರಡಿಯಲ್ಲಿನ ನಿಷೇಧಾಜ್ಞೆ ಈ ಹಿಂದಿನಂತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here